ದಾಂಡೇಲಿಯ ಡಾ ದಿನೇಶ ಅವರ ಡೆಂಟಲ್ ಕ್ಲಿನಿಕ್’ನಲ್ಲಿ ಕೆಲಸ ಮಾಡುವ ಮಹೇಂದ್ರ ವನ್ನೂರು ಅವರನ್ನು ಮೂವರು ಅಡ್ಡಗಟ್ಟಿ ಹೊಡೆದಿದ್ದಾರೆ. ಈ ಹೊಡೆದಾಟದಲ್ಲಿ ಮಹೇಂದ್ರ ವನ್ನೂರು ಅವರ ಬನಿಯನ್ ಹರಿದು ಹೋಗಿದ್ದು, ನ್ಯಾಯಕ್ಕಾಗಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಮಹೇಂದ್ರ ವನ್ನೂರು ಅವರು ದಾಂಡೇಲಿಯ ಗಾಂಧಿನಗರದ ನಿವಾಸಿ. ಕಳೆದ 10 ವರ್ಷಗಳಿಂದ ಅವರು ಜಿ ಎನ್ ರೋಡಿನಲ್ಲಿರುವ ಡಾ ದಿನೇಶ ಅವರ ಡೆಂಟಲ್ ಕ್ಲಿನಿಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜುಲೈ 28ರಂದು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಅವರಿಗೆ ಡಾ ದಿನೇಶ ಅವರು ಫೋನ್ ಮಾಡಿದ್ದರು.
`ತಾನೂ ಊರಿನಿಂದ ಬಂದಿದ್ದು, ಲಗೇಜ್ ಮನೆ ಮೇಲಿಡುವ ಕೆಲಸವಿದೆ. ಬೇಗ ಬಾ’ ಎಂದು ಡಾ ದಿನೇಶ ಅವರು ಹೇಳಿದರು. ಹೀಗಾಗಿ ಮಹೇಂದ್ರ ವನ್ನೂರು ತಮ್ಮ ಸ್ಕೂಟಿ ತೆಗೆದುಕೊಂಡು ವೈದ್ಯರ ಮನೆ ಬಳಿ ಹೋಗಿದ್ದರು. ಅವರು ಹೇಳಿದ ಎಲ್ಲಾ ಕೆಲಸ ಮುಗಿಸಿ ಮನೆಗೆ ಮರಳುವಾಗ ರಾತ್ರಿ 11 ಗಂಟೆ ಆಗಿತ್ತು.
ಸ್ಕೂಟಿಯಲ್ಲಿ ಮರಳುತ್ತಿದ್ದ ಮಹೇಂದ್ರ ವನ್ನೂರು ಅವರನ್ನು ದಾಂಡೇಲಿ ಟೌನ್‌ಶಿಫ್’ನ ಸುಲೆಮಾನ್ ಗೌಸ್ ಬೆನ್ನಟ್ಟಿ ಬಂದರು. ಅವರ ಜೊತೆ ಇನ್ನೂ ಇಬ್ಬರು ಇದ್ದರು. ಈ ಎಲ್ಲರೂ ಸೇರಿ 14ನೇ ಬ್ಲಾಕ್ ರಸ್ತೆ ಬಳಿ ಮಹೇಂದ್ರ ವನ್ನೂರು ಅವರನ್ನು ಅಡ್ಡಗಟ್ಟಿದರು. ಎಲ್ಲರೂ ಸೇರಿ ಹಿಗ್ಗಾ ಮುಗ್ಗ ಥಳಿಸಿದರು. ಈ ಹೊಡೆದಾಟದಲ್ಲಿ ಮಹೇಂದ್ರ ವನ್ನೂರ್ ಅವರ ಬಟ್ಟೆ-ಬನಿಯನ್ ಹರಿಯಿತು.
ಬೆನ್ನು ಹಾಗೂ ಕುತ್ತಿಗೆಗೆ ನೋವಾಯಿತು. ಈ ಎಲ್ಲಾ ವಿಷಯದ ಬಗ್ಗೆ ಮಹೇಂದ್ರ ವನ್ನೂರು ಅವರು ಮನೆಯಲ್ಲಿ ಹೇಳಿದ್ದು, ಗುರು-ಹಿರಿಯರ ಸಲಹೆಪಡೆದು ಪೊಲೀಸ್ ಠಾಣೆಗೆ ಬಂದರು. ತಮಗಾದ ಅನ್ಯಾಯದ ಬಗ್ಗೆ ಅಲ್ಲಿ ದೂರು ದಾಖಲಿಸಿದರು.
Discussion about this post