ಕೊಂಕಣ ರೈಲ್ವೆ ಇನ್ಮುಂದೆ ವಿದ್ಯುತ್ ಉತ್ಪಾದನಾ ಕೇಂದ್ರದಿoದಲೇ ನೇರವಾಗಿ ವಿದ್ಯುತ್‌ಪಡೆಯಲಿದೆ.
ವಿವಿಧ ವಿದ್ಯುತ್ ಪೂರೈಕೆ ಕಂಪನಿಗಳಿoದ ಕೊಂಕಣ ರೈಲ್ವೆ ನಿಗಮವು ವಿದ್ಯುತ್ ಪಡೆಯುತ್ತದೆ. ಬಾರ್ಕೂರು, ಸೇನಾಪುರ, ಕುಂದಾಪುರ ಮುರ್ಡೇಶ್ವರ, ಕುಮಟಾ, ಕಾರವಾರ ಹೀಗೆ ವಿವಿದ ವಿದ್ಯುತ್ ಗ್ರಿಡ್ ಮೂಲಕ ವಿದ್ಯುತ್ ಸರಬರಾಜು ನಡೆಯುತ್ತದೆ. ಆದರೆ, ಕೆಲ ಬಾರಿ ವಿದ್ಯುತ್ ಗ್ರಿಡ್ ಮೂಲಕ ವಿದ್ಯುತ್ ಸರಬರಾಜು ಆಗದ ಸಮಸ್ಯೆ ಎದುರಾಗಿದ್ದು, ಆ ವೇಳೆ ಗೋವಾದಿಂದ ವಿದ್ಯುತ್ಪಡೆಯುವುದು ಕೊಂಕಣ ನಿಗಮಕ್ಕೆ ಅನಿವಾರ್ಯವಾಗಿತ್ತು. ಈ ಸಮಸ್ಯೆ ತಪ್ಪಿಸಲು ವಿದ್ಯುತ್ ಉತ್ಪಾದಿಸುವ ಕೆಪಿಸಿಯಿಂದಲೇ ನೇರವಾಗಿ ಪಡೆಯಲು ಕೊಂಕಣ ರೈಲ್ವೆ ಮುಂದಾಗಿದೆ.
ಇದಕ್ಕಾಗಿ ಕದ್ರಾ ವಿದ್ಯುದಾಗಾರದಿಂದ ನೇರವಾಗಿ 110ಕೆವಿ ವಿದ್ಯುತ್ ಲೈನ್ ಎಳೆದು ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಇದರಿಂದ ಮುರ್ಡೇಶ್ವರ ಅಥವಾ ಕುಮಟಾ ಮುಂತಾದೆಡೆ ವಿದ್ಯುತ್ ಸರಬರಾಜು ಆಗದಿದ್ದರೂ ಗೋವಾ ರಾಜ್ಯದ ಮೊರೆ ಹೋಗುವ ಅವಶ್ಯಕತೆ ಇಲ್ಲ.
`ಹೊಸ ಗ್ರಿಡ್ ವೋಲ್ಟೆಜ್ ಸ್ಥಿರತೆ ಕಾಪಾಡಲು ಆಧುನಿಕ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೇ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಗತ್ಯ ತಂತ್ರಜ್ಞಾನಗಳನ್ನು ಆಳವಡಿಡಲಾಗಿದೆ. ಇದರಿಂದ ಯಾವುದಾದರೂ ಒಂದು ಗ್ರಿಡ್ಡಿನಲ್ಲಿ ವಿದ್ಯುತ್ ಕಡಿತವಾದರೂ ರೈಲು ಸಂಚಾರಕ್ಕೆ ಸಮಸ್ಯೆಯಾಗುವುದಿಲ್ಲ’ ಎಂದು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಜಾ ಹೇಳಿದ್ದಾರೆ.
Discussion about this post