ಯಲ್ಲಾಪುರದ ಕಿರವತ್ತಿ ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ದಾಖಲೆ ಸಂಗ್ರಹಕ್ಕೆ ಅಲೆದಾಡುತ್ತಿದ್ದು, ಈ ನಡುವೆ ಅವ್ಯವಹಾರದ ಸಮಗ್ರ ತನಿಖೆಗೆ ಜಯ ಕರ್ನಾಟಕ ತಾಲೂಕು ಪಂಚಾಯತಗೆ ಅರ್ಜಿ ಸಲ್ಲಿಸಿದೆ.
`ಕಿರವತ್ತಿ ಗ್ರಾಮ ಪಂಚಾಯತದಲ್ಲಿ ನಿಧಿ-2, 15ನೇ ಹಣಕಾಸು ಹಾಗೂ ಪರಿಶಿಷ್ಟರಿಗೆ ಮೀಸಲಿಟ್ಟ ಹಣ ದುರುಪಯೋಗವಾಗಿದೆ. ಈ ಬಗ್ಗೆ ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಮೊದಲು ಧ್ವನಿ ಎತ್ತಿದ್ದು, ಅವರ ಆರೋಪವನ್ನು ಆಡಳಿತ ಗಂಭೀರವಾಗಿ ಪರಿಗಣಿಸಬೇಕು’ ಎಂದು ಜಯಕರ್ನಾಟಕ ತಾಲೂಕು ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಹೇಳಿದ್ದಾರೆ.
ADVERTISEMENT
ADVERTISEMENT
`ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರ ತನಿಖೆಗೆ ಸಮಿತಿ ರಚಿಸಬೇಕು. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ವಿಲ್ಸನ್ ಫರ್ನಾಂಡಿಸ್ ಆಗ್ರಹಿಸಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯತಗೆ ಪತ್ರ ನೀಡಿರುವ ಅವರು ಅದರ ಪ್ರತಿಯನ್ನು ಲೋಕಾಯುಕ್ತರಿಗೂ ರವಾನಿಸಿದ್ದಾರೆ.
Discussion about this post