ಮೇಷ ರಾಶಿ: ಪರಿಸ್ಥಿತಿಯ ನಿಯಂತ್ರಣ ಹೊಂದುತ್ತಿದ್ದoತೆ ನಿಮ್ಮ ಆತಂಕ ಕಣ್ಮರೆಯಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಸಾಲಪಡೆದ ಜನ ಯಾವುದೇ ಪರಿಸ್ಥಿತಿಯಲ್ಲಿಯೂ ಅದನ್ನು ಮರುಪಾವತಿ ಮಾಡಬೇಕಾಗುತ್ತದೆ.
ವೃಷಭ ರಾಶಿ: ನಿಮ್ಮ ಮಹತ್ವಾಕಾಂಕ್ಷೆ ಮತ್ತು ಆಕಾಂಕ್ಷೆಗಳು ಭಯದಿಂದ ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚಿವೆ. ನಿಮ್ಮ ಅವಾಸ್ತವಿಕ ಯೋಜನೆಯಿಂದ ಹಾನಿಯೇ ಹೆಚ್ಚು.
ಮಿಥುನ ರಾಶಿ: ಯಶಸ್ಸು ಸಾಧಿಸಲು ಸಮಯದ ಜೊತೆ ನಿಮ್ಮ ಆಲೋಚನೆಯನ್ನು ಬದಲಿಸಿಕೊಳ್ಳಿ. ಹಣಕಾಸು ವಿಷಯದ ಬಗ್ಗೆ ವಿಶೇಷಗಮನಹರಿಸಿ. ಬಿಡುವಿನ ವೇಳೆ ಧ್ಯಾನ ಮಾಡಿ. ಆಧ್ಯಾತ್ಮಿಕ ಚಿಂತನೆಯಿoದ ಸಮಸ್ಯೆ ದೂರವಾಗಲಿದೆ.
ಕರ್ಕಾಟಕ ರಾಶಿ: ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು. ದೇವರ ಧ್ಯಾನ ಮಾಡಲು ಮರೆಯದಿರಿ.
ಸಿಂಹ ರಾಶಿ: ಹಣದ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಮನೆಯ ಪರಿಸರದಲ್ಲಿ ಒಳ್ಳೆಯ ಬದಲಾವಣೆಗಳನ್ನು ಮಾಡುತ್ತೀರಿ. ತಪ್ಪು ಸಂವಹನ ತೊಂದರೆಗೆ ಕಾರಣವಾಗಲಿದೆ.
ಕನ್ಯಾ ರಾಶಿ: ನಿಮ್ಮ ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿದಲ್ಲಿ ಮತ್ತು ಕೆಲಸದಲ್ಲಿ ನಿಮ್ಮ ಬದ್ಧತೆಯನ್ನು ಪ್ರದರ್ಶಿಸಿದಲ್ಲಿ ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ನಿಮ್ಮ ಮನೆಯ ಸದಸ್ಯರು ನಿಮ್ಮೊಂದಿಗೆ ಅನೇಕ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ.
ತುಲಾ ರಾಶಿ: ಒಳ್ಳೆಯ ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲ ನೀಡಲಿದೆ. ಪ್ರವಾಸದ ಮೊದಲು ಪೊಷಕರ ಅನುಮತಿ ಪಡೆಯಿರಿ. ಇಲ್ಲವಾದಲ್ಲಿ ನಂತರ ವಿರೋಧವ್ಯಕ್ತವಾಗಬಹುದು. ನಿಮ್ಮ ಗೌರವಕ್ಕೆ ಧಕ್ಕೆ ತರುವವರೊಂದಿಗೆ ಸಂಬAಧ ಹೊಂದಬೇಡಿ.
ವೃಶ್ಚಿಕ ರಾಶಿ: ಹಣ ಸಂಗ್ರಹದ ಬಗ್ಗೆ ಆಲೋಚಿಸಿ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಶಾಂತವಾಗಿರಿ. ಪರೀಕ್ಷೆಯ ಭಯದಿಂದ ಧೈರ್ಯಗೆಡುವುದು ಬೇಡ. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ತರುತ್ತವೆ.
ಧನು ರಾಶಿ: ಮನೆಯಲ್ಲಿ ಕೆಲಸ ಮಾಡುವಾಗ ವಿಶೇಷ ಎಚ್ಚರಿಕೆವಹಿಸಿ. ಮನೆ ಬಳಕೆಯ ವಸ್ತುಗಳ ಅಸಡ್ಡೆಯ ಬಳಕೆ ನಿಮಗೆ ಸಮಸ್ಯೆ ಮಾಡಬಹುದು. ಆರೋಗ್ಯದ ಕಡೆ ಎಚ್ಚರವಿರಲಿ.
ಮಕರ ರಾಶಿ: ಸಹಭಾಗಿತ್ವದ ಯೋಜನೆಗಳು ಲಾಭಕ್ಕಿಂತ ಹೆಚ್ಚು ಸಮಸ್ಯೆ ತರಲಿದೆ. ನಿಮ್ಮ ಒಳ್ಳೆಯ ತನ ದುರುಪಯೋಗ ಮಾಡಿಕೊಳ್ಳುವವರಿಂದ ದೂರವಿರಿ. ಅಗತ್ಯ ಕೆಲಸ ಮೊದಲು ಪೂರೈಸಿ. ಅವನ್ನು ಮರೆತು ಸಮಸ್ಯೆಗೆ ಸಿಲುಕದಿರಿ.
ಕುಂಭ ರಾಶಿ: ಭವಿಷ್ಯದ ಆರ್ಥಿಕ ಯೋಜನೆಗಳ ಬಗ್ಗೆ ಈಗಲೇ ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ಮಾತುಗಳನ್ನು ನಿಯಂತ್ರಣದಲ್ಲಿರಿಸಲು ಪ್ರಯತ್ನಿಸಿ. ಕೆಲಸದ ಒತ್ತಡ ಮನಸ್ಸನ್ನು ಹಾಳು ಮಾಡಲಿದೆ.
ಮೀನ ರಾಶಿ: ನಿಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಕಷ್ಟವಾಗುತ್ತದೆ. ನಿಮ್ಮ ವರ್ತನೆಯಲ್ಲಿ ತಾಳ ತಪ್ಪದಿರಲಿ. ವರ್ತನೆ ಒರಟಾದರೆ ಮನೆಯಲ್ಲಿನ ಶಾಂತಿ ಹಾಳಾಗಲಿದೆ.
Discussion about this post