ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ದೌರ್ಜನ್ಯ ಆರೋಪ ನ್ಯಾಯಾಲಯದಲ್ಲಿ ಸಾಭೀತಾಗಿದ್ದು, ಈ ಪ್ರಕರಣದಲ್ಲಿ ವಾದ ಮಂಡಿಸಿದ ನ್ಯಾಯವಾದಿ ಹಾಗೂ ಆದೇಶ ಪ್ರಕಟಿಸಿದ ನ್ಯಾಯಧೀಶರಿಬ್ಬರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ.
ಮಹಿಳೆಯ ಮೇಲೆ ದೌರ್ಜನ್ಯ ಆರೋಪದ ಅಡಿ ಪ್ರಜ್ವಲ್ ರೇವಣ ವಿರುದ್ಧ ಅಂಕೋಲಾ ಮೂಲದ ನ್ಯಾಯವಾದಿ ಅಶೋಕ ನಾಯ್ಕ ಅವರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಅಂಕೋಲಾ ಮೂಲದ ನ್ಯಾಯಾಧೀಶ ಸಂತೋಷ ಭಟ್ಟ ಅವರು ಪ್ರಜ್ವಲ್ ರೇವಣ ಅವರನ್ನು ದೋಷಿ ಎಂದು ಆದೇಶ ನೀಡಿದ್ದಾರೆ.
ಅಂಕೋಲೆಯ ನಾಡವರ ಸಮುದಾಯ ಭವನದ ಬಳಿ ವಾಸವಾಗಿದ್ದ ಅಶೋಕ ನಾಯ್ಕ ಅವರು ಗೋಖಲೆ ಸೆಂಟಿನರಿ ಕಾಲೇಜಿನ ಮಾಜಿ ವಿದ್ಯಾರ್ಥಿ. ಶಿರಸಿ ವಕೀಲ ಸಂಘದ ಸದಸ್ಯರಾಗಿ ವೃತ್ತಿ ಜೀವನ ಶುರು ಮಾಡಿದ ಅವರು ನಂತರ ದೀರ್ಘಕಾಲ ಪ್ರೊಸಿಕ್ಯುಷನ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಂಕೋಲಾ ತಾಲೂಕಿನ ಹಳವಳ್ಳಿಯ ಸಂತೋಷ ಗಜಾನನ ಭಟ್ಟ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಅವರು ದಾಖಲೆಗಳ ಅಧ್ಯಯನನಡೆಸಿ ಪ್ರಭಾವಿ ರಾಜಕಾರಣಗಳ ವಿರುದ್ಧ ಅನೇಕ ಆದೇಶಗಳನ್ನು ಪ್ರಕಟಿಸಿದ್ದಾರೆ.
ರಾಜ್ಯದ ಗಮನಸೆಳೆದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರೇವಣ್ಣ ದೋಷಿ ಎಂದು ಸಾಭೀತಾಗಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ಉತ್ತರ ಕನ್ನಡ ಜಿಲ್ಲೆಯ ನ್ಯಾಯವಾದಿ ಹಾಗೂ ನ್ಯಾಯಮೂರ್ತಿಯ ಪಾತ್ರ ಮಹತ್ವವೆನಿಸಿದೆ.
Discussion about this post