ಧಾರಾಕಾರ ಮಳೆಯ ನಡುವೆಯೂ ಸಿದ್ದಾಪುರದಲ್ಲಿ ಅಕ್ರಮ ಮರಳುಗಾರಿಕೆ ಮುಂದುವರೆದಿದೆ. ಜೀವ ಸಂಕುಲಗಳ ಬದುಕಿಗೆ ಮಾರಕವಾಗುವ ರೀತಿ ಮರಳುಗಾರಿಕೆ ನಡೆಸಿದವನ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ.
ಅಗಸ್ಟ್ 1ರ ನಸುಕಿನ 4 ಗಂಟೆಗೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಅಕ್ರಮ ಮರಳು ಸಾಗಾಟ ವಾಹನ ಕಾಣಿಸಿದೆ. ಅದನ್ನು ಬೆನ್ನತ್ತಿದ ಪಿಐ ಬಿ ಜಿ ಸೀತಾರಾಮ ಮರಳು ಸಾಗಾಟ ವಾಹನವನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಮರಳು ಕದ್ದ ಶಿರಸಿಯ ಬೆಳಲೆಯ ದೇವರಾಜ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ADVERTISEMENT
ಸಿದ್ದಾಪುರದ ಕಾನೆಹಳ್ಳಿ ಹೊಳೆಯಲ್ಲಿದ್ದ ಮರಳನ್ನು ದೇವರಾಜ ನಾಯ್ಕ ಕದ್ದಿದ್ದರು. ಯಾವುದೇ ಪರವಾನಿಗೆಪಡೆಯದೇ, ಸರ್ಕಾರಕ್ಕೂ ರಾಜಧನ ಪಾವತಿಸದೇ ಅದನ್ನು ಸಾಗಾಟ ಮಾಡುತ್ತಿದ್ದರು. ತಮ್ಮ ಟಾಟಾ 909 ವಾಹನದಲ್ಲಿ 5 ಟನ್ ಮರಳನ್ನು ಸಾಗಿಸುತ್ತಿದ್ದರು.
ಶಿರಸಿ-ಸಿದ್ದಾಪುರ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನವನ್ನು ಪೊಲೀಸರು ಅಡ್ಡಗಟ್ಟಿ ಮರಳುಸಹಿತ ವಾಹನವನ್ನು ಜಪ್ತು ಮಾಡಿದರು.
ADVERTISEMENT
Discussion about this post