`ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣ’ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದರ ಶೋಧಕ್ಕೆ ಎಸ್‌ಐಟಿ ರಚನೆ ಮಾಡಿದೆ. ಸತ್ಯ ಶೋಧನಾ ತಂಡದಲ್ಲಿದ್ದ ಗ್ರಾಮಾಂತರ ಪೊಲೀಸ್ ಇನ್ಸಪೆಕ್ಟರ್ ಮಂಜುನಾಥ ಗೌಡ ಅವರು ದೂರುದಾರನಿಗೆ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದಾರೆ.
`ನೀನು ದೂರು ನೀಡಿದ ಕಾರಣ ನಿನಗೆ ಶಿಕ್ಷೆಯಾಗುತ್ತದೆ. ದೂರು ಹಿಂಪಡಯದೇ ಇದ್ದಲ್ಲಿ ನಿನ್ನನ್ನು ಪೊಲೀಸರು ಬಂಧಿಸಲಿದ್ದಾರೆ. ಜೀವಮಾನವಿಡೀ ಜೈಲಿನಲ್ಲಿರಬೇಕಾಗುತ್ತದೆ’ ಎಂದು ಮಂಜುನಾಥ ಗೌಡ ಬೆದರಿಸಿದ ಬಗ್ಗೆ ಆರೋಪಿಸಲಾಗಿದೆ. ನೇತ್ರಾವತಿ ನದಿ ಬಳಿ ಶೋಧ ಕಾರ್ಯಾಚರಣೆ ನಡೆಯುವ ವೇಳೆ ದೂರುದಾರನಿಗೆ ಪೊಲೀಸ್ ಇನ್ಸಪೆಕ್ಟರ್ ಬೆದರಿಕೆ ಒಡ್ಡಿದ ಬಗ್ಗೆ ದೂರುದಾರನ ಪರ ವಕೀಲರು ಮೇಲಧಿಕಾರಿಗಳಿಗೆ ಇಮೇಲ್ ಮಾಡಿದ್ದಾರೆ.
`ಬೇರೆಯವರ ಪ್ರಜೋಚದನೆಯಿಂದ ಈ ದೂರು ನೀಡಿದ್ದೇನೆ’ ಎಂದು ಹೇಳಿಕೆ ನೀಡುವಂತೆಯೂ ದೂರುದಾರನಿಗೆ ಪೊಲೀಸರು ಬೆದರಿಸಿದ ಬಗ್ಗೆ ಸಾಮಾಜಿಕ ಹೋರಾಟಗಾರರು ಅಸಮಧಾನವ್ಯಕ್ತಪಡಿಸಿದ್ದಾರೆ. ಶಿರಸಿಯಲ್ಲಿದ್ದ ಪೊಲೀಸ್ ಅಧಿಕಾರಿ ಮಂಜುನಾಥ ಗೌಡ ಅವರ ವಿರುದ್ಧ ಜಾಲತಾಣದಲ್ಲಿಯೂ ಹೋರಾಟಗಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಎಸ್‌ಐಟಿ ತಂಡದ ಜೊತೆ ಶೋಧದಲ್ಲಿ ತೊಡಗಿದ್ದ ಮಂಜುನಾಥ ಗೌಡ ಅವರು ಶನಿವಾರ ಆ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ.
ಧರ್ಮಸ್ಥಳ ಹಾಗೂ ಸುತ್ತಲಿನ ಪ್ರದೇಶದಲ್ಲಿ ನೂರಾರು ಶವ ಹೂಳಲಾಗಿದೆ ಎಂಬ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನಲೆ ಸರ್ಕಾರ ವಿಶೇಷ ತಂಡ ರಚಿಸಿ ಅಲ್ಲಿ ಶೋಧ ಕಾರ್ಯ ಶುರು ಮಾಡಿತ್ತು. ಶೋಧದ ವೇಳೆ ಕೆಲ ಮೂಳೆಗಳು ಸಿಕ್ಕಿದ್ದು, ಸದ್ಯ ದೂರು ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿರಿಸಲಾಗಿದೆ. ದೂರುದಾರನ ಮುಖ ಕಾಣದಂತೆ ಮುಚ್ಚಿದ ಅಧಿಕಾರಿಗಳು ಅವರ ಜೊತೆಯೇ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ. ನಿನ್ನೆ-ಮೊನ್ನೆ ದೂರುದಾರನ ಪಕ್ಕದಲ್ಲಿಯೇ ಮಂಜುನಾಥ ಗೌಡ ಸುಳಿದಾಡುತ್ತಿದ್ದು, ಈ ವೇಳೆಯಲ್ಲಿಯೇ ಬೆದರಿಕೆ ಒಡ್ಡಿದ ಬಗ್ಗೆಯೂ ದೂರಲಾಗಿದೆ.
`ಇನ್ನೂ ದೂರುದಾರನಿಗೆ ಬೆದರಿಕೆ ಒಡ್ಡುವಂತೆ ಮಂಜುನಾಥ ಗೌಡ ಅವರಿಗೆ ಸೂಚಿಸಿದವರು ಯಾರು? ಎನ್ನುವದರ ಬಗ್ಗೆಯೂ ತನಿಖೆ ನಡೆಯಬೇಕು. ಆಗ, ಇಡೀ ಪ್ರಕರಣದ ಹಿಂದಿರುವ ಸೂತ್ರದಾರ ಸಿಕ್ಕಿ ಬೀಳಲಿದ್ದಾರೆ’ ಎನ್ನುವ ಬಗ್ಗೆಯೂ ಒತ್ತಾಯ ಕೇಳಿ ಬಂದಿದೆ.
Discussion about this post