ಉತ್ತರ ಕನ್ನಡ ಜಿಲ್ಲೆಯಲ್ಲಿ ಈಚೆಗೆ ವನ್ಯಜೀವಿಗಳ ಉಪಟಳ ಹೆಚ್ಚಾಗಿದೆ. ಅದರಲ್ಲಿಯೂ ಕರಡಿ ಎಲ್ಲೆಂದರಲ್ಲಿ ಮಾನವನ ಮೇಲೆ ಆಕ್ರಮಣ ನಡೆಸುತ್ತಿದೆ. ಭಾನುವಾರ ಜೊಯಿಡಾದ ಮನೆಯೊಂದಕ್ಕೆ ನುಗ್ಗಿದ ಕರಡಿ ಅಲ್ಲೆಲ್ಲ ಸಗಣಿ ಹಾಕಿ ರಂಪಾಟ ನಡೆಸಿದೆ.
ಜೊಯಿಡಾದ ಪಟ್ಟೆಗಾಳಿ ಊರಿಗೆ ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಕರಡಿ ಪ್ರವೇಶಿಸಿದೆ. ಊರಿನ ಮುಖ್ಯ ರಸ್ತೆಯಲ್ಲಿ ಓಡಾಡಿದ ಈ ವನ್ಯಜೀವಿ ನಂತರ ಸದಾನಂದ ಗಾವಡೆ ಅವರ ಮನೆಯೊಳಗೆ ಪ್ರವೇಶಿಸಿದೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಜನ ಜೀವ ಉಳಿಸಿಕೊಂಡಿದ್ದಾರೆ.
ಕೆಲಸಕ್ಕೆ ಹೋಗಿದ್ದ ಸದಾನಂದ ಗಾವಡೆ ಅವರ ಪುತ್ರ ಸಂತೋಷ ಗಾವಡೆ ಸಂಜೆ ಮನೆಗೆ ಮರಳಿದಾಗ ವನ್ಯಜೀವಿ ಆಗಮನದ ಬಗ್ಗೆ ಅರಿವಾಗಿದೆ. ಮನೆಗೆ ಅಳವಡಿಸಿದ್ದ ಸಿಮೆಂಟಿನ ಬಾಗಿಲು ಒಡೆದಿದೆ. ಅಲ್ಲಲ್ಲಿ ಹಾನಿ ಮಾಡಿದೆ. ಅಡುಗೆ ಮನೆ, ಮಲಗುವ ಕೋಣೆಯನ್ನು ಪ್ರವೇಶಿಸಿದೆ. ವಿವಿಧ ಕಡೆ ಗಲೀಜು ಮಾಡಿದೆ.
`ಕೆಲಸಕ್ಕಾಗಿ ಎಲ್ಲರೂ ಹೊಲಕ್ಕೆ ಹೋದಾಗ ಮನೆಗೆ ಕರಡಿ ನುಗ್ಗಿ ಹೊಸಲು ಮಾಡಿದೆ. ಹಗಲಿನಲ್ಲಿಯೇ ಕರಡಿ ಮನೆಗೆ ನುಗ್ಗಿದ್ದರಿಂದ ಆತಂಕವಾಗಿದೆ’ ಎಂದು ಸಂತೋಷ ಗಾವಡೆ ಹೇಳಿದ್ದಾರೆ.
Discussion about this post