ಮೇಷ ರಾಶಿ: ಮನೆ ಹಾಗೂ ವೈಯಕ್ತಿಕ ಸಂಬoಧ ಉತ್ತಮವಾಗಿರಲಿ. ಕೆಲಸದಲ್ಲಿ ಶ್ರದ್ಧೆಯಿಂದ ಇದ್ದರೆ ಪದೋನ್ನತಿ ಸಾಧ್ಯ. ದಿನದ ಅಂತ್ಯಕ್ಕೆ ವಿಶ್ರಾಂತಿ ಅಗತ್ಯ.
ವೃಷಭ ರಾಶಿ: ನಿಮ್ಮಲ್ಲಿನ ಗುರಿಯ ಬಗ್ಗೆ ಆಳವಾದ ಯೋಜನೆ ಮಾಡಿ. ಕುಟುಂಬದವರ ಜೊತೆ ಸಮಯ ಕಳೆಯಿರಿ. ಹಣಕಾಸು ವಿಷಯದಲ್ಲಿ ಎಚ್ಚರಿಕೆಯಿರಲಿ. ಹೊಸ ಕಲಿಕೆ, ಸ್ನೇಹ ಸಂಪಾದನೆಗೆ ಸೂಕ್ತ ದಿನ. ಆರೋಗ್ಯದ ಕಡೆ ಜೋಪಾನ.
ಮಿಥುನ ರಾಶಿ: ಸಾಮಾಜಿಕ ಜೀವನದಲ್ಲಿ ಉನ್ನತಿ ಸಿಗಲಿದೆ. ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸುವ ವಿಧಾನ ನಿಮಗೆ ಅರಿವಾಗಲಿದೆ. ಹಣಕಾಸು ಯೋಜನೆ ಪರಿಶೀಲನೆ ಮಾಡಿ. ಅನಗತ್ಯ ವಿಷಯಗಳಿಗೆ ತಲೆಹಾಕದಿರುವುದು ಒಳಿತು.
ಕರ್ಕ ರಾಶಿ: ಭಾವನಾತ್ಮಕ ನಿಲುವುಗಳಿಗೆ ಸ್ಪಷ್ಟತೆ ನೀಡಿ. ಕ್ರಿಯಾತ್ಮಕ ಮಾರ್ಗದಿಂದ ವೃತ್ತಿಯಲ್ಲಿ ಸಾಧನೆ ಸಾಧ್ಯ. ನಿಮ್ಮ ದೇಹ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸಹಾಯ ಕೇಳಿ ಬಂದವರಿಗೆ ನೆರವು ನೀಡಿ.
ಸಿಂಹ ರಾಶಿ: ನಿಮ್ಮ ಉತ್ಸಾಹ ಶಕ್ತಿ ಉನ್ನತಮಟ್ಟದಲ್ಲಿದೆ. ನಾಯಕತ್ವ ಗುಣವೂ ಉತ್ತಮ ಭವಿಷ್ಯ ನೀಡುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ಸಮಯ. ಆರೋಗ್ಯ ಹಾಗೂ ನೆಮ್ಮದಿಯ ಜೀವನಕ್ಕೆ ಸಮಯಕೊಡಿ.
ಕನ್ಯಾ ರಾಶಿ: ಹಣಕಾಸಿನ ಹೂಡಿಕೆ ಮಾಡುವಾಗ ಆಳ ಅಧ್ಯಯನ ಅಗತ್ಯ. ಸಂಬoಧಿಕರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಉಪಕಾರಿ. ನಿಮ್ಮ ಕೆಲಸ ಬೇರೆಯವರ ಗಮನ ಸೆಳೆಯುವ ಸಾಧ್ಯತೆ ಹೆಚ್ಚಿದೆ.
ತುಲಾ ರಾಶಿ: ಜೀವನದಲ್ಲಿ ಸಮತೋಲನ ನಿಲುವು ಕಾಪಾಡಿಕೊಳ್ಳಿ. ಹೊಸಬರ ಪರಿಚಯ ಆಗಲಿದೆ. ಆರ್ಥಿಕ ಬುದ್ಧಿವಂತಿಕೆ ನಿಮ್ಮ ಹೂಡಕೆ ಲಾಭ ದುಪ್ಪಟ್ಟು ಮಾಡಲಿದೆ. ಯೋಗ ಮತ್ತು ಧ್ಯಾನ ಮಾಡಿದರೆ ಭವಿಷ್ಯದ ಆರೋಗ್ಯ ಸಮಸ್ಯೆ ದೂರವಾಗಲಿದೆ.
ವೃಶ್ಚಿಕ ರಾಶಿ: ಭಾವೋದ್ವೇಗ ಹೆಚ್ಚಾಗಲಿದೆ. ದೈಹಿಕ ಶಕ್ತಿಯನ್ನು ಉತ್ತಮ ಕೆಲಸಕ್ಕೆ ಬಳಸಿ. ದುಡಿಯುವ ಶಕ್ತಿ ಬೇರೆಯವರ ಮೆಚ್ಚುಗೆಗೆ ಕಾರಣವಾಗಲಿದೆ.
ಧನು ರಾಶಿ: ಹೊಸ ಅವಕಾಶಗಳು ನಿಮಗಾಗಿ ಕಾದಿದೆ. ಅಧ್ಯಯನ, ಪ್ರವಾಸ ಹಾಗೂ ಹೊಸ ವಿಷಯ ಕಲಿಕೆಗೆ ಸೂಕ್ತ ದಿನ. ಸಂಬoದದಲ್ಲಿ ಪರಸ್ಪರ ಪ್ರೀತಿ-ಸಂತ್ರಪ್ತಿಯಿರಲಿ.
ಮಕರ ರಾಶಿ: ಭವಿಷ್ಯದ ಬಗ್ಗೆ ದೀರ್ಘ ಯೋಜನೆ ಮಾಡಿ. ಕುಟುಂಬದವರ ಸಲಹೆಪಡೆದು ಅದನ್ನು ಅನುಸರಿಸಿ. ಆರೋಗ್ಯ ಹಾಗೂ ಆರೈಕೆ ವಿಷಯದಲ್ಲಿ ಕಾಳಜಿವಹಿಸಿ. ಹೊಸ ಸಂಪರ್ಕದಿAದ ಉತ್ತಮ ಲಾಭವಿದೆ.
ಕುಂಭ ರಾಶಿ: ಸಾಮಾಜಿಕ ವಿಷಯಗಳನ್ನು ಮಾತನಾಡುವಾಗ ಚೈತನ್ಯ ಮೂಡಲಿದೆ. ಹೊಸ ಯೋಜನೆಗಳನ್ನು ಶುರು ಮಾಡಿ. ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಯಶಸ್ಸು ಸಾಧ್ಯ.
ಮೀನು ರಾಶಿ: ಸೃಜನಾತ್ಮಕ ಚಟುವಟಿಕೆಗಳಿಗೆ ಈ ದಿನ ಮೀಸಲಿಡಿ. ಹಣಕಾಸು ವಿಷಯದಲ್ಲಿ ಎಚ್ಚರ ಅಗತ್ಯ. ಕಠೋರವಾದ ಮಾತು ಸಂಬoಧ ಹಾಳು ಮಾಡುವ ಸಾಧ್ಯತೆಯಿದೆ. ಯೋಗ-ಧ್ಯಾನ ಮಾಡಲು ಮರೆಯದಿರಿ.
Discussion about this post