ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳ ಶೈಕ್ಷಣಿಕ ಸಮಸ್ಯೆ ಬಗ್ಗೆ ಯಲ್ಲಾಪುರದ ಮದನೂರು ಗ್ರಾ ಪಂ ಅಧ್ಯಕ್ಷ ವಿಠ್ಠು ಶಳಕೆ ಅವರು ರಾಮನಾಥ ಡೆವಲಪರ್ಸ ಮಾಲಕರಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಉದ್ಯಮಿ ಬಾಲಕೃಷ್ಣ ನಾಯಕ ಶಾಲಾ ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಪರಿಕ್ಕರಗಳನ್ನು ವಿತರಿಸಿದ್ದಾರೆ.
ಸೋಮವಾರ ಬಾಲಕೃಷ್ಣ ನಾಯಕ ಅವರು ಮದನೂರು ಭಾಗಕ್ಕೆ ತೆರಳಿ ಮಕ್ಕಳ ಪರಿಸ್ಥಿತಿ ಅವಲೋಕಿಸಿದರು. ಅದಾದ ನಂತರ ಅಲ್ಲಿದ್ದ ಎಲ್ಲಾ ಮಕ್ಕಳಿಗೂ ಉಡುಗರೆ ಹಂಚಿದರು. ಮಾದೇವಕೊಪ್ಪ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಅವರು ಬ್ಯಾಗು ಹಾಗೂ ಪಟ್ಟಿ-ಪುಸ್ತಕಗಳನ್ನು ನೀಡಿದರು. ಇದರೊಂದಿಗೆ ಮದನೂರು, ಮಾದೇವಕೊಪ್ಪ, ಖಂಡ್ರನಕೊಪ್ಪ ಭಾಗದ ವಿದ್ಯಾರ್ಥಿಗಳಿಗೂ ಅವರು ಕಲಿಕಾ ಸಾಮಗ್ರಿಗಳನ್ನು ಪೂರೈಸಿದರು.
ಊರಿಗೆ ಬಂದ ನಾಯಕರನ್ನು ರಾಮು ಬಿಚ್ಚುಕ್ಲೆ ಖಂಡ್ರನಕೊಪ್ಪ ಅವರು ಬರಮಾಡಿಕೊಂಡರು. `ಶಾಲೆ ಅಭಿವೃದ್ಧಿ ಹಾಗೂ ಮಕ್ಕಳ ಬಗ್ಗೆ ವಿಠ್ಠು ಶಳಕೆ ಅವರಿಗೆ ಅಪಾರ ಕಾಳಜಿಯಿದೆ. ಅವರ ಕಾಳಜಿಗೆ ಪೂರಕವಾಗಿ ಮಕ್ಕಳ ಶಿಕ್ಷಣಕ್ಕೆ ತಾನು ಸಹಕರಿಸಿದ್ದೇನೆ’ ಎಂದು ಬಾಲಕೃಷ್ಣ ನಾಯಕ ಅವರು ಈ ವೇಳೆ ಹೇಳಿದರು. `ಭವಿಷ್ಯದಲ್ಲಿಯೂ ಊರಿನ ಅಭಿವೃದ್ಧಿ ಹಾಗೂ ಸಮಸ್ಯೆಗೆ ಸ್ಪಂದಿಸುವಲ್ಲಿ ತಾನೂ ನಿಮ್ಮ ಜೊತೆಗಿರುವೆ’ ಎಂದು ಭರವಸೆ ನೀಡಿದರು.
ಶಾಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಾವು ಪಾಂಡ್ರಮೀಷೆ, ಗ್ರಾ ಪಂ ಸದಸ್ಯರಾದ ಹಣಮಂತ ವಾರೆಗೌಡಾ, ಸುನಂದಾ ವಡ್ಡರ್ ಹಾಗೂ ಸಾಮಾಜಿಕ ಕಾರ್ಯಕರ್ತ ದೊಂಡು ಪಾಟೀಲ್, ವಿಠ್ಠಲ್ ಪಾಂಡ್ರಮಿಷೆ, ನಾಗು ಸೆಳಕೆ, ಬಮ್ಮು ಬಿಚ್ಚುಕ್ಲೆ, ನಾಗು ಯಮಕರ್, ಜನ್ನು ತೋರತ್, ಸಂಜು ಮಿರಾಶಿ, ಕಾಳು ಥೋರತ್, ರಾಮು ಕೊಕರೆ, ರಾಮಾ ವಡ್ಡರ್, ಧೂಳು ಶೆಂಡಗೆ, ಬಾಪು ತಾಟೆ ಇತರರು ಮಕ್ಕಳ ಶ್ರೇಯೋಭಿವೃದ್ಧಿಗೆ ಹಾರೈಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಾಲು ನಾಯಕ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
Discussion about this post