ಜನೌಷಧಿ ಕೇಂದ್ರದಲ್ಲಿ ಖಾಸಗಿ ಔಷಧಿ ಮಾರಾಟ ಮಾಡಿದ ಹಿನ್ನಲೆ ಮುಂಡಗೋಡಿನ ಮಳಿಗೆಗೆ ಬೀಗ ಬಿದ್ದಿದೆ. ಆದರೆ, ಈ ಜನೌಷಧಿ ಕೇಂದ್ರವನ್ನು ಪುನಃ ಶುರು ಮಾಡಬೇಕು ಎಂದು ಆ ಭಾಗದ ಜನ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ಬಿಜೆಪಿ ಪ್ರಮುಖರು ಜನೌಷಧಿ ಕೇಂದ್ರದ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದು, ವಿವಿಧ ಸಂಘಟನೆಯವರು ಪ್ರತಿಭಟನೆಗೆ ಬೆಂಬಲ ನೀಡಿದರು. ಜನರಿಗೆ ಅನುಕೂಲವಾಗಿರುವ ಜನೌಷಧಿ ಕೇಂದ್ರ ತೆರೆಯುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪ್ರತಿಭಟನಾಕಾರರು ಪತ್ರ ರವಾನಿಸಿದರು.
`ಮುಂಡಗೋಡ ತಾಲೂಕಾ ಆಸ್ಪತ್ರೆ ಅವರಣದಲ್ಲಿರುವ ಜನೌಷಧಿ ಕೇಂದ್ರವನ್ನು ಏಕಾಏಕಿ ಸ್ಥಗಿತ ಮಾಡಲಾಗಿದೆ. ಇದರಿಂದ ಅನೇಕ ರೋಗಿಗಳಿಗೆ ಸಮಸ್ಯೆಯಾಗಿದೆ. ಅದರಲ್ಲಿಯೂ ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ವಿವರಿಸಿದರು.
ತಾಲೂಕಾ ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್ ಟಿ ಪಾಟೀಲ್ ಮತ್ತು ಅಶೋಕ ಚಲವಾದಿ ಪ್ರತಿಭಟನೆ ಮುಂದಾಳತ್ವವಹಿಸಿದ್ದರು. ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ, ಮುಖಂಡರಾದ ಭರತರಾಜ ಹದಳಗಿ, ಗುರು ಕಾಮತ್, ಬಾಬುರಾವ್ ವಾಲ್ಮೀಕಿ, ಗುಡ್ಡಪ್ಪಾ ತಳವಾರ, ಮಂಜುನಾಥ ಶೇಟ ಇತರರಿದ್ದರು.
Discussion about this post