ಮೇಷ ರಾಶಿ: ಈ ದಿನ ನಿಮಗೆ ಯಶಸ್ಸಿನಿಂದ ಕೂಡಿದೆ. ಯೋಜಿತ ಕೆಲಸಗಳು ಸರಾಗವಾಗಿ ಸಾಗುತ್ತದೆ. ಕುಟುಂಬದಲ್ಲಿ ಪ್ರೀತಿ-ಸಾಮರಸ್ಯ ಸಿಗಲಿದೆ. ಹೂಡಿಕೆ ವಿಷಯದಲ್ಲಿ ಜಾಣ್ಮೆ ಅಗತ್ಯ.
ವೃಷಭ ರಾಶಿ: ಜೀವನದಲ್ಲಿ ಏರಿಳಿತ ಸಾಮಾನ್ಯ. ಅದಕ್ಕಾಗಿ ಕುಗ್ಗುವುದು ಬೇಡ. ಶ್ರಮ ಹಾಗೂ ತಾಳ್ಮೆಯಿಂದ ಕೆಲಸ ಮಾಡಿ. ವ್ಯವಹಾರಿಕ ವಿಷಯದಲ್ಲಿ ಜಾಗೃತೆಯಿರಲಿ. ಅನಗತ್ಯ ವೆಚ್ಚ ಬೇಡ. ಕೌಟುಂಬಿಕ ವಿಷಯದ ಅಭಿಪ್ರಾಯ ಹೇಳುವಾಗ ಗೊಂದಲ ಆಗಲಿದೆ.
ಮಿಥುನ ರಾಶಿ: ಅನೇಕ ದಿನಗಳಿಂದ ಬಾಕಿ ಉಳಿದ ಕೆಲಸ ಪೂರ್ಣವಾಗಲಿದೆ. ದೇವರ ಆರಾಧನೆ ಮಾಡಿ. ಹಿರಿಯರ ಬೆಂಬಲದಿoದ ಯಶಸ್ಸು ಸಿಗುತ್ತದೆ. ದಾಂಪತ್ಯ ಹಾಗೂ ಪ್ರೇಮ ಸಂಬoಧ ಸೊಗಸಾಗಿರಲಿದೆ.
ಕಟಕ ರಾಶಿ: ಸಾಕಷ್ಟು ಒತ್ತಡ ನಿಮ್ಮನ್ನು ಕಾಡಿದರೂ ಹೋರಾಟದ ನಂತರ ಯಶಸ್ಸು ಖಚಿತ. ನಿಮ್ಮಲ್ಲಿರುವ ಕೋಪ ನಿಯಂತ್ರಿಸಿ. ಮನೆ ಸದಸ್ಯರ ಜೊತೆ ಸಮಯ ಕೊಡಿ. ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ.
ಸಿಂಹ ರಾಶಿ: ಲಾಭ-ನಷ್ಟ ಎರಡು ಸರಿ ಸಮಾನವಾಗಿರಲಿದೆ. ಕೆಲಸದ ನಿಮಿತ್ತ ಪ್ರಯಾಣ ಸಾಧ್ಯತೆ ಹೆಚ್ಚಿದೆ. ವ್ಯವಹಾರದಲ್ಲಿ ಏರಿಳಿತ ಸಾಮಾನ್ಯ. ಉತ್ಸಾಹದಿಂದ ಕೆಲಸ ಮಾಡಿ.
ಕನ್ಯಾ ರಾಶಿ: ಆದಾಯದ ಮೂಲಗಳು ಹೆಚ್ಚಾಗಲಿದೆ. ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಸಾಮರಸ್ಯದ ಜೀವನ ನಡೆಯಲಿದೆ. ಆರೋಗ್ಯದ ಬಗ್ಗೆ ಜಾಗೃತಿಯಿರಲಿ.
ತುಲಾ ರಾಶಿ: ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಯೋಜನೆಯ ಕಾರ್ಯಗಳು ಯಶಸ್ಸು ತರಲಿದೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕುಟುಂಬದವರ ಬೆಂಬಲ ನಿಮ್ಮ ಹುಮ್ಮಸ್ಸು ಹೆಚ್ಚಿಸಲಿದೆ.
ವೃಶ್ಚಿಕ ರಾಶಿ: ಯೋಜನೆಗಳನ್ನು ಕಾರ್ಯಗತಗೊಳಿಸಲು ಅಧಿಕ ಕೆಲಸ ಅಗತ್ಯ. ಹಿರಿಯರಿಂದ ಕಿರಿಕಿರಿ ಆದರೂ ಸಹಿಸಿಕೊಳ್ಳಿ. ಮಿಶ್ರ ಫಲಗಳ ಸಮಯವಾಗಿದ್ದು, ಮಾನಸಿಕ ಸ್ಥಿತಿ ಸ್ಥಿರವಾಗಿರಲಿ.
ಧನು ರಾಶಿ: ವೃತ್ತಿ ವ್ಯವಹಾರದಲ್ಲಿ ಲಾಭ ಸಿಗಲಿದೆ. ವಿಶೇಷ ವ್ಯಕ್ತಿಯೊಬ್ಬರಿಂದ ಸಹಾಯ ಆಗಲಿದೆ. ಅಧಿಕ ಜವಾಬ್ದಾರಿವಹಿಸಿಕೊಂಡರೂ ಆ ಕೆಲಸ ನಡೆಯಲಿದೆ.
ಮಕರ ರಾಶಿ: ಕೆಲಸಗಳಲ್ಲಿ ಸಮಯ ಪ್ರಜ್ಞೆ ಹಾಗೂ ಸಮಯ ಪಾಲನೆ ಅಗತ್ಯ. ಸೋಮಾರಿ ಸ್ವಭಾವ ನಿಮಗೆ ತೊಂದರೆ ಕೊಡಲಿದೆ. ಆರೋಗ್ಯದ ಬಗ್ಗೆ ಜಾಗೃತರಗಿರಿ. ಅನಗತ್ಯ ಜಗಳ-ವಾಗ್ವಾದ ನಿಮಗೆ ಬೇಡ.
ಕುಂಭ ರಾಶಿ: ವೃತ್ತಿ ಜೀವನದಲ್ಲಿ ಉತ್ತಮ ಗೌರವ ಸಿಗಲಿದೆ. ದೀರ್ಘ ಪ್ರಯಾಣದ ಲಕ್ಷಣಗಳಿವೆ. ಮಿಶ್ರ ಬಗೆಯ ಪ್ರತಿಫಲ ಸಿಕ್ಕರೂ ಆದಾಯಕ್ಕೆ ತೊಂದರೆ ಇಲ್ಲ.
ಮೀನ ರಾಶಿ: ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಜಾಣ್ಮೆಯ ಲಕ್ಷಣ. ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದಲ್ಲಿ ಪದೋನ್ನತಿ ಸಾಧ್ಯ. ಹಳೆಯ ಸ್ನೇಹಿತರು ಸಿಕ್ಕರೆ ಗೌರವದಿಂದ ಮಾತನಾಡಿ. ಹಣದ ನಿರ್ವಹಣೆ ಬಗ್ಗೆ ರೂಪುರೇಷೆ ನಿರ್ಮಿಸಿಕೊಳ್ಳಿ.
Discussion about this post