ಯಲ್ಲಾಪುರ, ಹಳಿಯಾಳ, ಕುಂದಾಪುರದಲ್ಲಿ ಮನೆ ಕಳ್ಳತನ ನಡೆಸಿದ್ದ ಕಳ್ಳರು ಹಳಿಯಾಳದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕಳ್ಳರ ಬಳಿಯಿದ್ದ ಕಾರು ಹಾಗೂ 7.95 ಲಕ್ಷ ರೂ ಮೌಲ್ಯದ ಆಭರಣ ವಶಕ್ಕೆಪಡೆದ ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದಾರೆ.
ಜುಲೈ 16ರಂದು ಹಳಿಯಾಳದ ನಿರ್ಮಲಾ ಗೌಳಿ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಗೌಳಿಗಲ್ಲಿಯಲ್ಲಿರುವ ಮನೆಗೆ ನುಗ್ಗಿದ ಕಳ್ಳರು ದೇವರ ಮನೆಗೆ ಪ್ರವೇಶಿಸಿ ಅಲ್ಲಿದ್ದ ಒಡವೆ ಕದ್ದು ಪರಾರಿಯಾಗಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ, ಶಿವಾನಂದ ಮದರಖಂಡಿ ಹಾಗೂ
ಪಿಐ ಜಯರಾಜ ಪಟೇಲ್, ಪಿಎಸ್‌ಐ ಬಸವರಾಜ ಮಬನೂರು, ಕೃಷ್ಣ ಅರಿಕೇರಿ ಅವರ ಜೊತೆ ಸೇರಿ ಈ ಪ್ರಕರಣ ಪತ್ತೆಗೆ ತಂಡ ರಚಿಸಿದರು. ತಾಂತ್ರಿಕ ತಜ್ಞ ಉದಯ ಗುನಗಾ ಅವರು ಈ ತಂಡಕ್ಕೆ ಸಹಕಾರ ನೀಡಿದರು.
ಜುಲೈ 29ರಂದು ಸೊಲ್ಲಾಪುರದ ಲಖನ್ ಕುಲಕರ್ಣಿ, ಸೊಲ್ಲಾಪುರದ ಸಂದೀಪ ಲವಟೆ, ವಿವೇಕ ಕಂಬಾರ್ ಹಾಗೂ ಅಜೀಜ ಮನಗುಳಿ ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಅವರೆಲ್ಲರೂ ಕೂಲಿ – ಕಟ್ಟಡ ಕೆಲಸ ಮಾಡಿಕೊಂಡಿದ್ದು, ಬಿಡುವಿನ ವೇಳೆ ಬೇರೆ ಬೇರೆ ಊರುಗಳಿಗೆ ತೆರಳಿ ಕದಿಯುತ್ತಿದ್ದರು. ಪೊಲೀಸ ಸಿಬ್ಬಂದಿ ಗಣಪತಿ, ಶ್ರೆöÊಶೈಲ ಬಿ ಎಂ, ವಿನೋದ ಜಿಬಿ, ಲಕ್ಷಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಜಾಲಿ, ಆಯಜ್ ಯಾದವಾಡ, ಕಾಶಿನಾಥ ಬಿಳ್ಳೂರು, ವಿನಾಯಕ ನಾಯ್ಕ, ಯೋಗೇಶ ಗೌಡ ಸೇರಿ ಆ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದರು.
ದಾಂಡೇಲಿಯ ಕೃಷ್ಣ ಬೆಳ್ಳವರಿ, ಪೊಲೀಸ್ ಜೀಪ್ ಚಾಲಕ ಉಮೇಶ ಅವರು ಕಳ್ಳರ ನಡವಳಿಕೆ ಗಮನಿಸಿದ್ದು, ಕೊನೆಗೆ ಆ ನಾಲ್ವರು ತಮ್ಮ ತಪ್ಪು ಒಪ್ಪಿಕೊಂಡರು. ಅವರನ್ನು ಶೋಧಿಸಿದಾಗ 7.95 ಲಕ್ಷ ರೂ ಮೌಲ್ಯದ ಆಭರಣ ಸಿಕ್ಕಿತು. 4 ಲಕ್ಷ ರೂ ಮೌಲ್ಯದ ಕಾರನ್ನು ಪೊಲೀಸರು ಜಪ್ತು ಮಾಡಿದರು.
Discussion about this post