ಕೈಗಾದಲ್ಲಿ ಕೆಲಸ ನಿರ್ವಹಿಸುತ್ತಿರುವ 4 ಅಣು ವಿದ್ಯುತ್ ಘಟಕಗಳು ಸೇರಿ ಈವರೆಗೆ 13 ಸಾವಿರ ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. ಕೈಗಾ ಅಧಿಕಾರಿಗಳ ಮಾಹಿತಿ ಪ್ರಕಾರ ಇದು ಅಂತರಾಷ್ಟ್ರೀಯ ಮಟ್ಟದ ಸಾಧನೆಯಾಗಿದೆ.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ನ 6ನೇ ಪರಮಾಣು ವಿದ್ಯುತ್ ಕೇಂದ್ರ ಕೈಗಾದಲ್ಲಿದೆ. ಸದ್ಯ ಕೈಗಾದಲ್ಲಿ 4 ಅಣು ವಿದ್ಯುತ್ ಘಟಕಗಳಿವೆ. ಅವೆಲ್ಲವೂ 220 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಸಮರ್ಥವಾಗಿದೆ. ಸದ್ಯ 700 ಮೆಗಾವ್ಯಾಟ್ ಸಾಮರ್ಥ್ಯದ ಇನ್ನೆರಡು ಭಾರಜಲ ಘಟಕಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2030ರ ಅವಧಿಗೆ ಅದರ ಕೆಲಸ ಮುಕ್ತಾಯವಾಗುವ ನಿರೀಕ್ಷೆಯಿದೆ.
ಕೈಗಾದಲ್ಲಿ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅಣು ಶಕ್ತಿ ಇಲಾಖೆ, ಅಣುಶಕ್ತಿ ನಿಯಂತ್ರಣ ಆಯೋಗಗಳು ತಾತ್ವಿಕ ಅನುಮೋದನೆ ನೀಡಿದೆ. ರಿಯಾಕ್ಟರ್ ನಿರ್ಮಾಣದ ಚಟುವಟಿಕೆಗಳು, ನ್ಯೂಕ್ಲಿಯರ್ ಘಟಕಗಳ ಸಿವಿಲ್, ಇಲೆಕ್ಟ್ರಿಕಲ್ ಕಾಮಗಾರಿಗಳನ್ನು ಮೆಗಾ ಇಂಜಿನಿಯರ್ಸ್ ಮತ್ತು ಇನ್ ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿವಹಿಸಿಕೊoಡಿದೆ. ಟರ್ಬೈನ್ ವಿಭಾಗದ ಕಾಮಗಾರಿಗಳನ್ನು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್‌ಇಎಲ್) ಕೈಗೊಳ್ಳಲಿದೆ. ಎಲೆಕ್ಟ್ರಿಕಲ್ ಮತ್ತು ಸುರಕ್ಷತೆ ವಿಭಾಗದ ಇನ್ನೊಂದು ಕಾಮಗಾರಿಯನ್ನು ಇಸಿಎಲ್ ಎಂಬ ಅಣು ವಿದ್ಯುತ್ ಇಲಾಖೆಯ ಸಹೋದರ ಸಂಸ್ಥೆ ಜವಾಬ್ದಾರಿವಹಿಸಿಕೊಂಡಿದೆ.
ಕೈಗಾದ 1ನೇಘಟಕವು 962 ದಿನಗಳವರೆಗೆ ಕಾರ್ಯನಿರ್ವಹಿಸಿ, ನಿರಂತರವಾಗಿ ಕಾರ್ಯನಿರ್ವಹಿಸಿದ ವಿಶ್ವದ ಮೊದಲ ವಾಣಿಜ್ಯ ಪರಮಾಣು ವಿದ್ಯುತ್ ರಿಯಾಕ್ಟರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ರಿಯಾಕ್ಟರುಗಳ ಆಯುಷ್ಯ ವೃದ್ಧಿ ಹಾಗೂ ಬೃಹತ್ ಪ್ರಮಾಣದಲ್ಲಿ ಕೂಲಂಟ್ ಚಾನೆಲ್ ಬದಲಾವಣೆ ಮತ್ತು ಫೀಡರ್ ಬದಲಾವಣೆಗಾಗಿ ಕೈಗಾ-1 ಘಟಕವು 2025ರ ಏಪ್ರಿಲ್ 1 2025 ರಿಂದ ಸ್ಥಗಿತಗೊಂಡಿದೆ. ಈ ಚಟುವಟಿಕೆಯು 18 ತಿಂಗಳುಗಳ ಕಾಲ ನಡೆಯುತ್ತದೆ.
`ಕೈಗಾ 1ರಿಂದ 4 ನೇ ಘಟಕದಲ್ಲಿ ಒಟ್ಟು 595 ಉದ್ಯೋಗಿಗಳಿದ್ದು, ಅದರಲ್ಲಿ 483 ಜನ ಕರ್ನಾಟಕದವರಾಗಿದ್ದಾರೆ. ಒಟ್ಟು 2057 ಗುತ್ತಿಗೆ ಉದ್ಯೋಗಿಗಳ ಪೈಕಿ 1737 ಕರ್ನಾಟಕದವರಿದ್ದು, ಅದರಲ್ಲಿ 1601 ಜನ ಉತ್ತಕನ್ನಡ ಜಿಲ್ಲೆಯವರಾಗಿದ್ದಾರೆ. ಅಧಿಕಾರಿಗಳ ಹೇಳಿಕೆ ಪ್ರಕಾರ, ಇಲ್ಲಿನ ವಿಕಿರಣದ ಪ್ರಭಾವ ನಿಗಧಿಗಿಂತ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು ಸಾರ್ವಜನಿಕರು ಹಾಗೂ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.
ವನ್ಯಜೀವಿ ವಲಯಕ್ಕೆ ಹಣ!
ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಪ್ರತಿ ವಷÀð 9 ರಿಂದ 16 ಕೊಟಿಯವರೆಗೂ ಕೈಗಾ ಅಣು ಘಟಕ ಹಣವನ್ನು ವಿನಿಯೋಗಿಸುತ್ತಿದೆ. ಇದುವರೆಗೆ ಜನ ಜೀವನ ಅಭಿವೃದ್ಧಿಗಾಗಿ 110 ಕೋಟಿ ರೂ. ಖರ್ಚು ಮಾಡಲಾಗಿದ್ದು, ಕಾಳಿ ಹುಲಿ ಮೀಸಲು ವಲಯದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ 20 ಕೋಟಿ ರೂ ಗಳನ್ನು ವ್ಯಯಿಸಲಾಗಿದೆ ಎಂಬುದು ಅಧಿಕಾರಿಗಳು ನೀಡಿರುವ ಮಾಹಿತಿ.
ಈ ಎಲ್ಲಾ ವಿಷಯದ ಬಗ್ಗೆ ಕೈಗಾ ಅಣು ವಿದ್ಯುತ್ ಕೇಂದ್ರದ ನಿರ್ದೇಶಕ ಬಿ ವಿನೋದ ಕುಮಾರ್ ಮಂಗಳವಾರ ಮಾಧ್ಯಮದವರ ಜೊತೆ ಮಾಹಿತಿ ಹಂಚಿಕೊAಡರು. ಎನ್‌ಪಿಸಿಐಎಲ್ ಕಾರ್ಪೊರೇಟ್ ನಿರ್ವಹಣೆ ವಿಭಾಗದ ಉಮೇದ ಯಾದವ್, ಕೈಗಾ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸುವರ್ಣಾ ಗಾಂವಕರ್, ಪರಿ ಯೋಜನಾ ನಿರ್ದೇಶಕ ಜೆ ಎಲ್ ಸಿಂಹ , ಕೈಗಾ 1 ಮತ್ತು 2 ನಿರ್ದೇಶಕ ಶ್ರೀರಾಮ್, 3 ಮತ್ತು 4ರ ನಿರ್ದೇಶಕ ಎಸ್ ಕೆ ಓಝಾ, ಮುಂಬಯಿಯ ಬಾಬಾ ಅಣು ವಿಜ್ಞಾನ ಕೇಂದ್ರದ ನಿವೃತ್ತ ನಿರ್ದೇಶಕ ಹೇಮಂತ ಹಲ್ಡವನೇಕರ್ ಇತರರು ಇದ್ದರು.
Discussion about this post