ಮೇಷ ರಾಶಿ: ಕುಟುಂಬದಲ್ಲಿ ಸಂತೋಷ ಕಾಣಲಿದೆ. ನಿಮ್ಮೊಳಗಿರುವ ಶಕ್ತಿಯ ಬಗ್ಗೆ ನಿಮಗೆ ಅರಿವಾಗಲಿದೆ. ಆರ್ಥಿಕ ಲಾಭ ಸಿಗಲಿದೆ. ಸಹೋದ್ಯೋಗಿಗಳ ಸಹಕಾರವೂ ಇರಲಿದೆ.
ವೃಷಭ ರಾಶಿ: ಹೊಸ ಹೊಸ ಯೋಜನೆಗಳನ್ನು ಶುರು ಮಾಡಲು ಉತ್ತಮ ದಿನ. ವೃತ್ತಿಯಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತೀರಿ. ಆರೋಗ್ಯದ ವಿಷಯದಲ್ಲಿ ಎಚ್ಚರವಾಗಿರಿ. ಸಾಲ ಹಾಗೂ ಹೂಡಿಕೆ ವಿಷಯದಲ್ಲಿ ಮುನ್ನಚ್ಚರಿಕೆ ಅಗತ್ಯ.
ಮಿಥುನ ರಾಶಿ: ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಉತ್ತಮ ವಾತಾವರಣ ಕಂಡುಬರಲಿದೆ. ಹಣದ ಹೂಡಿಕೆಗೆ ಯೋಜನೆ ರೂಪಿಸಲು ಸಕಾಲ.
ಕರ್ಕ ರಾಶಿ: ಸಕಾರಾತ್ಮಕ ಚಿಂತನೆಯಿoದ ಪ್ರಗತಿ ಆಗಲಿದೆ. ಕೆಲಸದ ವಿಷಯದಲ್ಲಿ ಹೊಸ ಜವಾಬ್ದಾರಿ ಬರಲಿದೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ.
ಸಿಂಹ ರಾಶಿ: ತಂಡದ ಮೂಲಕ ವೃತ್ತಿ ನಿಭಾಯಿಸಿದಲ್ಲಿ ಸಾಧನೆ ಸಾಧ್ಯ. ಆರ್ಥಿಕ ವಿಷಯದಲ್ಲಿ ಜಾಗೃತೆ ಅಗತ್ಯ. ಸಾಮಾಜಿಕ ಚಟುವಟಿಕೆ ಹೆಚ್ಚಳವಾಗಲಿದೆ. ಆರೋಗ್ಯ ಎಂದಿನoತೆ ಇರಲಿದೆ.
ಕನ್ಯಾ ರಾಶಿ: ಕಿರಿಯರ ಸಹಾಯದಿಂದ ಕೆಲಸ ಸುಗಮಮವಾಗಿ ಸಾಗಲಿದೆ. ಹಣಕಾಸು ವಿಷಯ ಸಾಧಾರಣವಾಗಿರಲಿದೆ. ಕುಟುಂಬದವರ ಬಳಿ ಗೌರವಾಗಿ ನಡೆದುಕೊಳ್ಳಿ. ವೈಯಕ್ತಿಕ ಸಮಸ್ಯೆಗಳಿಗೆ ಯೋಗ್ಯ ಪರಿಹಾರ ಸಿಗಲಿದೆ.
ತುಲಾ ರಾಶಿ: ಸ್ನೇಹಿತರ ಸಹಕಾರದಿಂದ ವೃತ್ತಿ ಜೀವನ ಸುಧಾರಣೆ ಆಗಲಿದೆ. ವ್ಯಾಪಾರದಲ್ಲಿ ಅನುಕೂಲವಾಗಲಿದೆ. ಉದ್ಯೋಗಿಗಳಿಗೆ ಸಂಕಷ್ಟ ಬಂದರೂ ಭವಿಷ್ಯದಲ್ಲಿ ಉತ್ತಮ ದಿನಗಳಿವೆ.
ವೃಶ್ಚಿಕ ರಾಶಿ: ಭಾವನಾತ್ಮಕ ವಿಷಯದಲ್ಲಿ ಬದಲಾವಣೆ ಆಗಲಿದೆ. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಿ. ಆರೋಗ್ಯದಲ್ಲಿ ಏರುಪೇರಾದರೆ ಅದನ್ನು ಗಂಭೀರವಾಗಿ ಪರಿಗಣಿಸಿ.
ಧನು ರಾಶಿ: ಹೊಸ ಸಂಪರ್ಕಗಳಿoದ ಕೆಲಸದ ಬೆಳವಣಿಗೆ ಸಾಧ್ಯ. ಆರ್ಥಿಕ ವಿಷಯ ಮಾತುಕತೆಗೆ ಸಕಾಲ. ಕುಟುಂಬದಲ್ಲಿ ಪ್ರೀತಿ ವಾತಾವರಣವಿರಲಿದೆ. ಪ್ರಯಾಣ ಸಾಧ್ಯತೆ ಹೆಚ್ಚಿದೆ.
ಮಕರ ರಾಶಿ: ಹೆಚ್ಚುವರಿ ಹೊಣೆಗಾರಿಗೆ ಬರಲಿದೆ. ಆದಾಯ ಹಾಗೂ ವೆಚ್ಚ ಸಮತೋಲನ. ಕುಟುಂಬದವರ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ.
ಕುಂಭ ರಾಶಿ: ಉನ್ನತ ಸ್ಥಾನ ಹಾಗೂ ಗೌರವ ಸಿಗಲಿದೆ. ಹೊಸ ಯೋಜನೆಗೆ ಅನುಕೂಲಕರ ಸಮಯ. ಹಣ ಹೂಡಿಕೆಗೆ ಯೋಗ್ಯ ದಿನವಲ್ಲ. ಸ್ನೇಹಿತರ ಜೊತೆ ಸಮಯ ಕಳೆಯಿರಿ.
ಮೀನ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹಣಕಾಸಿನ ವ್ಯವಹಾರಗಳನ್ನು ತಾಳ್ಮೆಯಿಂದ ಮುಗಿಸಿ. ಆಪ್ತರ ಜೊತೆಗೆ ಬಾಂಧವ್ಯದಿoದ ಇರಿ.
Discussion about this post