ಕುಮಟಾದ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ಪಠ್ಯದ ಜೊತೆ ಆಟ-ಓಟಗಳಿಗೂ ಒತ್ತು ನೀಡಿದ್ದು, ಅದರ ಪರಿಣಾಮವಾಗಿ ಇಲ್ಲಿನ ವಿದ್ಯಾರ್ಥಿಗಳು ತಾಲೂಕ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ಯೋಗ, ಚದರುಂಗ, ಈಜು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಅಗಸ್ಟ 5ರಂದು ಕುಮಟಾ ತಾಲೂಕ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು. ಬಾಲಕರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜಿನ ಸುಮುಖ ಭಟ್ಟ, ಮನೋಜ್ ಹೆಬ್ಬಾರ, ಅಮೋಘ ಹೆಗಡೆ ಸಾಧನೆ ಮಾಡಿದರು. ಚದುರಂಗ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ನಾಗಭೂಷಣ್ ಹೆಬ್ಬಾರ್, ಬಾಲಕಿಯರ ವಿಭಾಗದಲ್ಲಿ ಕೆ ಎಸ್ ನೌನಿ, ಭೂಮಿಕ ಹೆಗಡೆ, ಜನ್ಯ ನಾಯ್ಕ ಬಹುಮಾನಪಡೆದರು. ಈಜು ಸ್ಪರ್ಧೆಯಲ್ಲಿ ಸುಮುಖ ಜಿ ಭಟ್ಟ ಎಲ್ಲರ ಗಮನ ಸೆಳೆದಿದ್ದು, ಈ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ನಾಗೇಂದ್ರ ಭಟ್ಟ ಅಚವೆ ಹಾಗೂ ಅವರ ತಂಡದವರು ಯೋಗ ಸ್ಪರ್ಧೆಯ ನಿರ್ಣಾಯಕಾರಿದ್ದರು. ರಾಮಚಂದ್ರ ಭಟ್ಟ, ಆನಂದ ಸ್ವಾಮಿ ಶಿರಸಿ ಮತ್ತು ತಂಡದವರು ಚದುರಂಗ ಸ್ಪರ್ಧೆಯ ನಿರ್ಣಾಯಕರಾಗಿ ಕೆಲಸ ನಿರ್ವಹಿಸಿದರು. ಜಿ ಸಿ ಪಟಗಾರ್ ಅವರ ತಂಡದವರು ಈಜು ಸ್ಪರ್ಧೆಯ ನಿರ್ಣಾಯಕರಾಗಿ ಜವಾಬ್ದಾರಿ ನಿರ್ವಹಿಸಿದರು. ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆಗೆ ನಿರ್ಣಾಯಕರು ಮೆಚ್ಚುಗೆವ್ಯಕ್ತಪಡಿಸಿದರು.
ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕೆನರಾ ಎಕ್ಸಲೆನ್ಸ್ ಸಂಸ್ಥೆಯ ಅಧ್ಯಕ್ಷ ಡಾ ಜಿ ಜಿ ಹೆಗಡೆ ಅವರು ಶುಭಕೋರಿದರು. ಕಾಲೇಜು ಆಡಳಿತ ಮಂಡಳಿಯ ವಿಶ್ವಸ್ಥ ಡಿ ಎನ್ ಭಟ್ಟ , ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಪ್ರಾಚಾರ್ಯ ನಾಗರಾಜ ಹೆಗಡೆ, ಉಪಪ್ರಾಚಾರ್ಯೆ ರಮ್ಯಾ ಸಭಾಹಿತ, ಕ್ರೀಡಾ ಸಂಚಾಲಕ ಗಣಪತಿ ಭಟ್ಟ ಹಾಗೂ ಕಾಲೇಜು ಸಿಬ್ಬಂದಿ ಸಾಧಕ ಕ್ರೀಡಾಪಟುಗಳನ್ನು ಅಭಿನಂಧಿಸಿದರು. `ಜಿಲ್ಲಾಮಟ್ಟದಲ್ಲಿಯೂ ಪ್ರಶಸ್ತಿ ಗೆದ್ದು ಬನ್ನಿ’ ಎಂದು ಸಹಪಾಠಿಗಳು ಹಾರೈಸಿದರು.
Discussion about this post