ಹೊನ್ನಾವರದ ಗೇರುಸೊಪ್ಪಾ ಅಣೆಕಟ್ಟು ಭದ್ರತೆಗೆ ನಿಯೋಜನೆಯಾಗಿರುವ ಪೊಲೀಸ್ ಸಿಬ್ಬಂದಿ ಕಾರಿಗೆ ಕಂಟೇನರ್ ಡಿಕ್ಕಿಯಾಗಿದೆ. ಪೊಲೀಸ್ ಸಿಬ್ಬಂದಿ ಗಣೇಶ ಗೌಡ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಕಾರು ನುಜ್ಜು ನೂರಾಗಿದೆ.
ಹೊನ್ನಾವರ ಹೊಸಪಟ್ಟಣ ಕಳಸಿನಮೂಟೆಯ ಗಣೇಶ ಗೌಡ ಅವರು ಕಳೆದ 2 ತಿಂಗಳಿನಿAದ ಗೇರುಸೊಪ್ಪ ಅಣೆಕಟ್ಟಿನ ಭದ್ರತೆಗೆ ನಿಯೋಜನೆಯಾಗಿದ್ದಾರೆ. ಅಗಸ್ಟ 5ರಂದು ಅವರು ವೈಯಕ್ತಿಕ ಕೆಲಸಕ್ಕೆ ಸಾಗರಕ್ಕೆ ಹೋಗಿದ್ದು, ಮರಳುವಾಗ ಅವರ ಕಾರು ಅಪಘಾತಕ್ಕೀಡಾಗಿದೆ. ಸಾಗರದ ಕೆಲಸ ಮುಗಿಸಿ ಹೊನ್ನಾವರಕ್ಕೆ ಮರಳಿ ಬರುವಾಗ ಬಂಗಾರ ಕುಸುಮ ಜಲಪಾತದ ತಿರುವಿನಲ್ಲಿ ಎದುರಿನಿಂದ ಬಂದ ಕಂಟೇನರ್ ಡಿಕ್ಕಿಯಾಗಿದೆ.
ಉತ್ತರ ಪ್ರದೇಶದ ವಿಮಲೇಶ ಯಾದವ್ ಆ ಕಂಟೇನರ್ ಓಡಿಸುತ್ತಿದ್ದರು. ತಿರುವಿನಲ್ಲಿಯೂ ವೇಗವಾಗಿ ಬಂದ ಅವರು ಏಕಾಏಕಿ ಪೊಲೀಸ್ ಸಿಬ್ಬಂದಿ ಗಣೇಶ ಗೌಡ ಅವರ ಕಾರಿಗೆ ಡಿಕ್ಕಿ ಹೊಡೆದರು. ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದ್ದು, ಗಣೇಶ ಗೌಡ ಅವರು ಅಪಾಯದಿಂದ ಪಾರಾದರು. ಅಪಘಾತಕ್ಕೀಡಾದ ಎರಡು ವಾಹನವನ್ನು ಪೊಲೀಸ್ ಠಾಣೆಗೆ ಕರೆತಂದ ಗಣೇಶ ಗೌಡ ಅವರು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಿದರು.
Discussion about this post