ನಿತ್ಯದ ದುಡಿಮೆಗಾಗಿ ಚಿಪ್ಪೆಕಲ್ಲು ಆರಿಸಲು ಹೋಗಿದ್ದ ಕುಮಟಾದ ನಾಗಮ್ಮ ಹರಿಕಂತ್ರ ಅವರು ಗಜನಿ ಭೂಮಿಯಲ್ಲಿ ಸಿಲುಕಿ ಸಾವನಪ್ಪಿದ್ದಾರೆ.
ADVERTISEMENT
ಕುಮಟಾದ ಗುಡಕಗಾಲ ದಾಸುಮನೆಯಲ್ಲಿ ನಾಗಮ್ಮ ಹರಿಕಂತ್ರ (70) ಅವರು ವಾಸವಾಗಿದ್ದರು. ನಿತ್ಯದ ಆದಾಯಕ್ಕಾಗಿ ಅವರು ಚಿಪ್ಪೆಕಲ್ಲು ಆರಿಸಿ ಅದರ ಮಾಂಸ ತೆಗೆದು ಮಾರುತ್ತಿದ್ದರು. ಅಗಷ್ಟ 3ರಂದು ಕೆಲಸಕ್ಕೆ ಹೋದ ಅವರು ಸಂಜೆಯಾದರೂ ಮರಳಿರಲಿಲ್ಲ.
ಅಗಷ್ಟ 5ರಂದು ಸಂಜೆ ಗುಡಗಾಲಿನ ಗಜನಿ ಹಿನ್ನೀರಿನ ಪ್ರದೇಶದಲ್ಲಿ ಶವವೊಂದು ಸಿಕ್ಕಿದ್ದು, ಹತ್ತಿರ ಹೋಗಿ ಪರಿಶೀಲಿಸಿದಾಗ ಅದು ನಾಗಮ್ಮ ಹರಿಕಂತ್ರ ಅವರ ದೇಹ ಎಂದು ಗೊತ್ತಾಯಿತು. ಕಾಲು ಜಾರಿ ನೀರಿಗೆ ಬಿದ್ದು ಅವರು ಸಾವನಪ್ಪಿದ ಬಗ್ಗೆ ಶಂಕಿಸಲಾಗಿದೆ. ನಾಗಮ್ಮ ಅವರ ಮೊಮ್ಮಗ ವಿಘ್ನೇಶ್ ಹರಿಕಂತ್ರ ಕುಮಟಾ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ADVERTISEMENT
Discussion about this post