ಮೇಷ ರಾಶಿ: ನಿಮ್ಮ ಮಾತುಗಳು ಹಿತವಾಗಿದ್ದರೆ ಅದು ಸಾಕಷ್ಟು ಪ್ರಭಾವ ಬೀರಲಿದೆ. ಅಭಿಪ್ರಾಯ ಮಂಡಿಸುವ ವಿಷಯದಲ್ಲಿ ಧೈರ್ಯವಾಗಿ ಮುನ್ನಡೆಯಿರಿ. ಸ್ಪಷ್ಟತೆಯಿಂದ ವರ್ತಿಸಿದಲ್ಲಿ ನಿಮಗೆ ಉತ್ತಮ ಗೌರವ ಸಿಗಲಿದೆ.
ವೃಷಭ ರಾಶಿ: ನಿಧಾನವಾಗಿ ಪ್ರಗತಿ ಸಾಧ್ಯ. ಸಂಕೋಚ ಬಿಟ್ಟು ಕೆಲಸ ಮಾಡಿ. ನಿಮ್ಮ ಸ್ಥಿರ ಸ್ವಭಾವ ಹಾಗೇ ಇರಲಿ. ಶಾಂತಿಯಿoದ ಯೋಚಿಸಿ ನಿರ್ಧಾರ ಕೈಗೊಳ್ಳಿ.
ಮಿಥುನ ರಾಶಿ: ಸಾಕಷ್ಟು ಸವಾಲುಗಳು ಎದುರಾದರೂ ಅದನ್ನು ನಿಭಾಯಿಸಿ. ಹಿಂಚರಿಕೆ ಬೇಡ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದರೆ ಅದರಲ್ಲಿಯೇ ಪರಿಹಾರವೂ ಸಿಗುತ್ತದೆ.
ಕರ್ಕ ರಾಶಿ: ನಿಮ್ಮಲ್ಲಿರುವ ಪ್ರಾಮಾಣಿಕತೆ ಹಾಗೂ ಶಾಂತ ಸ್ವಭಾವವೇ ನಿಮಗೆ ಶಕ್ತಿ. ಅನಗತ್ಯವಾಗಿ ಜೋರಾಗಿ ಮಾತನಾಡಬೇಡಿ. ಉತ್ಸಾಹದಲ್ಲಿ ಕೆಲಸ ಮಾಡಿದರೆ ಯಶಸ್ಸು ಸಾಧ್ಯ.
ಸಿಂಹ ರಾಶಿ: ನಿಮ್ಮ ವ್ಯಕ್ತಿತ್ವವೇ ನಿಮಗೆ ಆದರ್ಶ. ಅನ್ಯ ನಿರೀಕ್ಷೆಗಳಿಗೆ ಶರಣಾಗದೇ ಕೆಲಸ ಮಾಡಿ. ಸತ್ಯ ಕಾಪಾಡಲು ಭಯ ಬೇಡ. ಆಂತರಿಕ ಧೈರ್ಯ ಹೆಚ್ಚಿಸಿಕೊಳ್ಳಿ.
ಕನ್ಯಾ ರಾಶಿ: ನಿಮ್ಮೊಳಿಗಿರುವ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ಸಮಯ. ಚಿಂತೆ ಮಾಡುವುದನ್ನು ಬಿಟ್ಟು ಮುನ್ನಡೆಯಿರಿ. ಇತರರಿಗೆ ಸ್ಪೂರ್ತಿಯಾಗುವಂತೆ ನಿಮ್ಮ ನಡವಳಿಕೆಯಿದ್ದರೆ ಉತ್ತಮ.
ತುಲಾ ರಾಶಿ: ಈ ದಿನ ಅತ್ಯಂತ ಜಾಗೃತಿಯಿಂದ ಹೆಜ್ಜೆ ಹಾಕುವುದು ಉತ್ತಮ. ಪ್ರತಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ತಾಳ್ಮೆ ಕಳೆದುಕೊಳ್ಳಬೇಡಿ. ಹೃದಯದ ಬಗ್ಗೆ ಕಾಳಜ ಅಗತ್ಯ.
ವೃಶ್ಚಿಕ ರಾಶಿ: ನಿಮ್ಮ ಕನಸು ಈಡೇರಿಕೆಗಾಗಿ ವಿಭಿನ್ನವಾಗಿ ಚಿಂತಿಸಿ. ಹೊಸ ದಾರಿ ಸಿಕ್ಕರೆ ಮುನ್ನಡೆಯಿರಿ. ನಿಯಮಗಳ ಚೌಕಟ್ಟಿನಿಂದ ಹೊರಬಂದು ಸೃಜನಾತ್ಮಕ ಕೆಲಸಕ್ಕೆ ಆದ್ಯತೆ ಕೊಟ್ಟರೆ ಯಶಸ್ಸು ಖಚಿತ.
ಧನು ರಾಶಿ: ನೀಡಿದ ಭರವಸೆಗಳನ್ನು ತಪ್ಪದೇ ಪಾಲಿಸಿ. ಚಿಹ್ನೆಗಳ ಮೂಲಕ ಸಕಾರಾತ್ಮಕ ಸಂದೇಶ ಸಿಗಲಿದ್ದು, ಅದನ್ನು ಊಹಿಸಿ. ಭಯದಿಂದ ಮುಕ್ತವಾಗಿರಿ. ಬದಲಾವಣೆಯ ಮನಸ್ಸನ್ನು ಒಪ್ಪಿಕೊಳ್ಳಿ.
ಮಕರ: ನಿಮಗೆ ಉತ್ಸಾಹ ಕೊಡುವ ಕೆಲಸ ಮಾಡಿ. ಅತಿ ಕಷ್ಟಕರ ಕೆಲಸಗಳನ್ನು ಒಪ್ಪಿಕೊಳ್ಳಬೇಡಿ. ಬೇರೆಯವರ ಬಳಿ ಅವರ ಹೃದಯ ಗೆಲ್ಲುವ ರೀತಿ ಮಾತನಾಡಿ. ಧ್ಯಾನ ಮಾಡುವುದು ನಿಮಗೆ ಆರೋಗ್ಯಕರ
ಕುಂಭ ರಾಶಿ: ಬದಲಾವಣೆ ಜಗದ ನಿಯಮ ಎಂಬುದನ್ನು ಅರಿಯಿರಿ. ಕೆಲ ಬದಲಾವಣೆ ಕಷ್ಟ ತಂದರೂ ಅದು ಬೆಳವಣಿಗೆಗೆ ಪೂರಕ. ಹಳೆಯ ಮನಸ್ಥಿತಿಯಿಂದ ಹೊರಬಂದು ಹೊಸತನ್ನು ಸ್ವಾಗತಿಸಿ.
ಮೀನ ರಾಶಿ: ನಿಮ್ಮ ಸ್ನೇಹಪರ ವ್ಯಕ್ತಿತ್ವ ಶಕ್ತಿ ಕೊಡಲಿದೆ. ಇತರರನ್ನು ಆಕರ್ಷಿಸುವ ಶಕ್ತಿ ಹೆಚ್ಚಾಗಲಿದೆ. ಸ್ನೇಹಿತರಿಂದಲೂ ನಿಮಗೆ ಸಹಾಯ ಸಿಗಲಿದೆ.
Discussion about this post