ಕಾರವಾರದ ಸೀಬರ್ಡ ಪುನರ್ವಸತಿ ಕೇಂದ್ರದಲ್ಲಿ ತಟರಕ್ಷಕಪಡೆಯವರು ದೇಶಭಕ್ತಿ ಜಾಗೃತಿ ಸಂದೇಶ ಸಾರಿದ್ದಾರೆ. ಇಲ್ಲಿನ ಜನತಾ ವಿದ್ಯಾಲಯಕ್ಕೆ ಭೇಟಿ ನೀಡಿದ ಕೋಸ್ಟಗಾರ್ಡ ಸಿಬ್ಬಂದಿ ಅಲ್ಲಿನ ಮಕ್ಕಳಿಗೆ ಅರಿವು ಮೂಡಿಸಿದರು.
`ಆಗಸ್ಟ್ 15ರಂದು ದೇಶದ ಎಲ್ಲಡೆ ಸ್ವಾತಂತ್ರ‍್ಯೋತ್ಸವ ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ರಾಷ್ಟ್ರದ್ವಜ, ರಾಷ್ಟ್ರಗೀತೆ ಹಾಗೂ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗ ಬಲಿದಾನದ ಬಗ್ಗೆ ಅರಿಯಬೇಕು. ಮನೆ ಮನೆಗಳಲ್ಲಿಯೂ ತ್ರಿವರ್ಣ ಧ್ವಜ ಹಾರಾಡಬೇಕು’ ಎಂದು ಕೋಸ್ಟಲ್‌ಗಾರ್ಡಿನ ಡೆಪ್ಯುಟಿ ಕಮಾಂಡೆAಟ್ ಲಲಿತ್ ಗಿಲ್ಡಿಯಲ್ ಕರೆ ನೀಡಿದರು.
ಶಾಲಾ ಮುಖ್ಯಾಧ್ಯಾಪಕಿ ವೀಣಾ ಜಿ ಮಾಳಿಗೆರ ಮಾತನಾಡಿ `ದೇಶದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನವಿರಬೇಕು. ರಾಷ್ಟ್ರಧ್ವಜವನ್ನು ರಾಷ್ಟ್ರೀಯ ಹಬ್ಬಗಳಲ್ಲಿ ಗೌರವಯುತವಾಗಿ ಬಳಸಿ ಹಬ್ಬವನ್ನು ವರ್ಣರಂಜಿತವಾಗಿ ಆಚರಿಸಬೇಕು’ ಎಂದರು. ಕಾರ್ಯಕ್ರಮದಲ್ಲಿ ಕೋಸ್ಟಲ್ ಗಾರ್ಡ್ ಸಮಿತಿಯ ಥಾಮಸ್ ಅಧಿಕೇರಿ ದೇವೇಂದ್ರ ನಾಯಕ್, ರೋಹಿತ್ ರಾಥೋಡ್, ಶಿವಾನಂದ್ ಲೋಹರ್, ಆನಂದ ಇತರರಿದ್ದರು.
ಶಾಲೆಯ ಶಿಕ್ಷಕರಾದ ಸ್ಮಿತಾ ನಾಯ್ಕ, ನಿಕಿತಾ ನಾಯ್ಕ, ನಾಗರಾಜ ಗೌಡ, ವಿಠಲ ಗಾಡ್. ಶ್ವೇತಾ ಫಕೀರೇಶ ಇತರರು ಕಾರ್ಯಕ್ರಮ ಸಂಘಟಿಸಿದ್ದರು. ಶಿಕ್ಷಕ ಜೈ ರಂಗನಾಥ ಅವರು ಸ್ವಾಗತ ಹಾಗೂ ನಿರ್ವಹಣೆಯ ಜವಾಬ್ದಾರಿ ನಿಭಾಯಿಸಿದರು.
Discussion about this post