ಮುಂಡಗೋಡದ ಬಂಕಾಪುರ ರಸ್ತೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿoದ 15 ಸಾವಿರ ರೂ ಮೌಲ್ಯದ ಗಾಂಜಾವನ್ನು ವಶಕ್ಕೆಪಡೆದಿದ್ದಾರೆ.
ಮುಂಡಗೋಡು ಇಂದಿರಾನಗರ ಪ್ಲಾಟನ ಸೈಯದ್ ಅಲಿ ಹುಸೇನಸಾಬ್ ಬೆಂಡಿಗೇರಿ ಗಾಂಜಾ ಸಾಗಿಸುವ ವೇಳೆ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, 260 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಜೊತೆಗೆ ಗಾಂಜಾ ಸಾಗಾಟಕ್ಕೆ ಬಳಸಿದ್ದ ಸ್ಕೂಟಿಯನ್ನು ವಶಕ್ಕೆಪಡೆದಿದ್ದಾರೆ.
ಸಿಪಿಐ ರಂಗನಾಥ ನೀಲಮ್ಮನವರ್ ಗಾಂಜಾ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಪಿಎಸ್‌ಐ ಪರಶುರಾಮ ಮಿರ್ಜಗಿ, ಪೊಲೀಸ್ ಸಿಬ್ಬಂ ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ್, ಮಹಾಂತೇಶ ಮುಧೋಳ್, ಬಸವರಾಜ್ ಒಡೆಯರ್ ಹಾಗೂ ಮಂಜುನಾಥ ಓಣಿಕೇರಿ ಕಾರ್ಯಾಚರಣೆಯಲ್ಲಿದ್ದರು.
Discussion about this post