• Latest
Comedy Khiladi's life is a tragedy Siddhi's life before death is miserable!

ಕಾಮಿಡಿ ಕಿಲಾಡಿಯ ಜೀವನ ಟ್ರಾಜಿಡಿ: ಸಿದ್ದಿ ಸಾವಿಗೂ ಮುಂಚಿನ ಬದುಕು ಶೋಚನೀಯ!

8 hours ago
Prediction for July 23 2025

2025 ಅಗಸ್ಟ 11ರ ದಿನ ಭವಿಷ್ಯ

2 hours ago
Those who went fishing were drowned.

ಮೀನು ಹಿಡಿಯಲು ಹೋದ ಸಹೋದರರು ನೀರುಪಾಲು

3 hours ago
ADVERTISEMENT

ಸಾಲ ಕೊಟ್ಟು ಕೆಟ್ಟ ಗೃಹಲಕ್ಷ್ಮಿ!

3 hours ago
Dyamanna's fight against the pit!

ಹೊಂಡದ ವಿರುದ್ಧ ದ್ಯಾಮಣ್ಣನ ಹೋರಾಟ!

3 hours ago

ಅಂಕೋಲಾ: ಮನೆ ಹಾಳು ಮಟ್ಕಾಗೆ ಆ ನಾಯಕನೇ ರಾಜ!

4 hours ago
Monday, August 11, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಕಾಮಿಡಿ ಕಿಲಾಡಿಯ ಜೀವನ ಟ್ರಾಜಿಡಿ: ಸಿದ್ದಿ ಸಾವಿಗೂ ಮುಂಚಿನ ಬದುಕು ಶೋಚನೀಯ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ, ವಿಡಿಯೋ
Comedy Khiladi's life is a tragedy Siddhi's life before death is miserable!

ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಸಿದ್ದಿ ಆತ್ಮಹತ್ಯೆಗೆ ಶರಣಾಗಿ 10 ದಿನ ಕಳೆದ ನಂತರ ಮಹತ್ವದ ವಿಡಿಯೋವೊಂದು ಹೊರ ಬಿದ್ದಿದೆ. ಚಂದ್ರಶೇಖರ ಸಿದ್ದಿ ಅವರ ಆಪ್ತರೇ ಹೊಡೆದು ಥಳಿಸಿದ ದೃಶ್ಯಾವಳಿಗಳು ಆ ವಿಡಿಯೋದಲ್ಲಿದೆ.

ADVERTISEMENT

ಆ ವಿಡಿಯೋದಲ್ಲಿ ಚಂದ್ರಶೇಖರ ಸಿದ್ದಿ ಅವರ ಪತ್ನಿ ವನಜಾಕ್ಷಿ ಸಿದ್ದಿ ಅವರು ಬಡಿಗೆ ಹಿಡಿದು ನಿಂತಿದ್ದಾರೆ. ಜೊತೆಗೆ ತಮ್ಮ ಪತಿಯನ್ನು ಅವರು ಅದೇ ಬಡಿಗೆಯಿಂದ ಥಳಿಸಿದ್ದಾರೆ. ಅಲ್ಲಿದ್ದ ಮತ್ತಿಬ್ಬರು ಚಂದ್ರಶೇಖರ ಸಿದ್ದಿ ಅವರಿಗೆ ಹೊಡೆದಿದ್ದು, ವ್ಯಕ್ತಿಯೊಬ್ಬರು `ಹೊಡೆಯಬೇಡಿ’ ಎನ್ನುತ್ತಿರುವ ಮಾತುಗಳು ಸೆರೆಯಾಗಿದೆ. ಸೋಫಾ ಮೇಲೆ ಚಂದ್ರಶೇಖರ ಸಿದ್ದಿ ಅವರು ಕುಳಿತಿದ್ದಾಗ ಎಲ್ಲರೂ ಸೇರಿ ಒಮ್ಮೆಲೆ ಮುಗಿ ಬಿದ್ದಿರುವುದು ವಿಡಿಯೋದಲ್ಲಿ ಕಾಣುತ್ತಿದೆ.

ವೈರಲ್ ಆದ ವಿಡಿಯೋ ನೋಡಿ.. ಇನ್ನಷ್ಟು ವಿವರ ಮುಂದೆ ಓದಿ..

ಯಲ್ಲಾಪುರ ತಾಲೂಕಿನ ತೆಲಂಗಾರ್ ಬಳಿಯ ವಜ್ರಳ್ಳಿ ಚಂದ್ರಶೇಖರ ಸಿದ್ದಿ ಅವರು ಕಾಮಿಡಿ ಕಿಲಾಡಿ ಮೂಲಕ ಲಕ್ಷಾಂತರ ಜನರನ್ನು ನಕ್ಕು ನಲಿಸಿದ್ದರು. ಅದಾದ ನಂತರ ಧಾರಾವಾಹಿ ಪಾತ್ರ ನಿಭಾಯಿಸಿದ್ದ ಅವರು ಊರಿಗೆ ಮರಳಿದ್ದರು. ಕಟ್ಟಿಗೆಯ ಶ್ರೀಪತಿ ಕೋಟೆಮನೆ ಅವರ ತೋಟದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಚಂದ್ರಶೇಖರ ಸಿದ್ದಿ ಅವರ ಜೊತೆ ಅವರ ಪತ್ನಿ ವನಜಾಕ್ಷಿ ಸಿದ್ದಿ ಹಾಗೂ ಮೂರು ವರ್ಷದ ಮಗ ಸಹ ಅಲ್ಲಿಯೇ ಉಳಿದಿದ್ದರು. ಜುಲೈ 31ರಂದು ಚಂದ್ರಶೇಖರ ಸಿದ್ದಿ ಅವರು ಅಂಗನವಾಡಿಗೆ ಹೋಗಿದ್ದ ಮಗನನ್ನು ಮನೆಗೆ ತಂದು ಬಿಟ್ಟಿದ್ದರು. ಅದಾದ ನಂತರ ತಂಬಿಗೆ ಹಿಡಿದು ಬೆಟ್ಟಕ್ಕೆ ಹೋಗಿದ್ದ ಅವರು ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ADVERTISEMENT

ಚಂದ್ರಶೇಖರ ಸಿದ್ದಿ ಅವರ ಸಾವಿನ ಬಗ್ಗೆ ಅವರ ತಾಯಿ ಲಕ್ಷ್ಮೀ ಸಿದ್ದಿ ಅವರು ಸಂಶಯವ್ಯಕ್ತಪಡಿಸಿದ್ದರು. 2020ರಲ್ಲಿ ಚಂದ್ರಶೇಖರ ಸಿದ್ದಿ ಅವರ ತಂದೆ ನಾಗಪ್ಪ ಸಿದ್ದಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಮಗ ಸಹ ಅದೇ ದಾರಿ ತುಳಿದ ಬಗ್ಗೆ ಲಕ್ಷ್ಮೀ ಸಿದ್ದಿ ನೋವು ತೋಡಿಕೊಂಡರು. `ಸೀತಾರಾಮ ಕಲ್ಯಾಣ ಧಾರಾವಾಹಿಯಲ್ಲಿ ಮಗ ಉತ್ತಮ ಪಾತ್ರ ಮಾಡಿ ಮನೆಗೆ ಬಂದಿದ್ದ. ಕಟ್ಟಿಗೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿ ವಾಸವಾಗಿದ್ದ. ಆದರೆ, ಆತ ಮತ್ತೆ ಮನೆಗೆ ಮರಳಲೇ ಇಲ್ಲ’ ಎನ್ನುತ್ತ ಭಾವುಕರಾಗಿದ್ದರು.

`ಚಂದ್ರಶೇಖರ ಸಿದ್ದಿ ಮದ್ಯಪಾನ ಮಾಡಿದಾಗಲೆಲ್ಲ ನನಗೆ ಹೊಡೆಯುತ್ತಿದ್ದ. ನನ್ನ ಮೇಲೆ ಅನಗತ್ಯ ಅನುಮಾನ ಪಡುತ್ತಿದ್ದ. ಆರು ತಿಂಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ಹೇಳಿದ್ದು, ಆಮೇಲೆ ನಂತರ ರಾಜಿ-ಸಮಾಧಾನ ನಡೆದಿತ್ತು. ನಂತರ ನಾವಿಬ್ಬರು ಸುಂದರ ಸಂಸಾರ ನಡೆಸುತ್ತಿದ್ದೇವು. ನನಗೂ ನಾಟಕ ತರಬೇತಿ ನೀಡುವುದಾಗಿ ಚಂದ್ರಶೇಖರ್ ಸಿದ್ದಿ ಹೇಳಿದ್ದರು. ನಮ್ಮ ನಡುವೆ ಸದ್ಯ ಯಾವುದೇ ಸಮಸ್ಯೆ ಇರಲಿಲ್ಲ’ ಎಂದು ಚಂದ್ರಶೇಖರ ಸಿದ್ದಿ ಅವರ ಪತ್ನಿ ವನಜಾಕ್ಷಿ ಸಿದ್ದಿ ಹೇಳಿದ್ದಾರೆ.

ಈ ನಡುವೆ ಚಂದ್ರಶೇಖರ ಸಿದ್ದಿ ಅವರಿಗೆ ಕುಟುಂಬದವರೇ ಹೊಡೆದ ವಿಡಿಯೋ ವೈರಲ್ ಆಗಿದ್ದು, ಮೂರು ತಿಂಗಳ ಹಿಂದಿನ ವಿಡಿಯೋ ಎನ್ನುವ ಮಾಹಿತಿಯಿದೆ. ಆ ಅವಧಿಯಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂಧಾನ ನಡೆದ ಬಗ್ಗೆಯೂ ಅಲ್ಲಿನವರು ಮಾಹಿತಿ ನೀಡಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

2025ರ ಅಗಸ್ಟ 10ರ ದಿನ ಭವಿಷ್ಯ

Next Post

ಶಕ್ತಿ ಯೋಜನೆ: ಆಧಾರ್ ಇದ್ದರೂ ಈ ಬಸ್ ಪ್ರಯಾಣ ಉಚಿತವಲ್ಲ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋