ಯಲ್ಲಾಪುರ ಪಟ್ಟಣದಲ್ಲಿ ಹಾದು ಹೋದ ಹೆದ್ದಾರಿಗಳಲ್ಲಿನ ಹೊಂಡ ಮುಚ್ಚದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅಖಿಲ ಕರ್ನಾಟಕ ಅಹಿಂದ ವೇದಿಕೆ ಜಿಲ್ಲಾಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ ಎಚ್ಚರಿಸಿದ್ದಾರೆ.
`ಇಲ್ಲಿನ ಹೊಂಡಗಳು ಅತ್ಯಂತ ಅಪಾಯಕಾರಿಯಾಗಿದೆ. ಆದರೂ, ಆಡಳಿತ ಈ ಬಗ್ಗೆ ಗಮನಹರಿಸಿಲ್ಲ. ಜನರ ತೆರಿಗೆ ಹಣವನ್ನು ಸರ್ಕಾರ ಮೂಲಭೂತ ಅಗತ್ಯಗಳಿಗೆ ಉಪಯೋಗಿಸುತ್ತಿಲ್ಲ’ ಎಂದವರು ದೂರಿದ್ದಾರೆ. `ಹೆದ್ದಾರಿ ಹೊಂಡದಿAದ ಸಾಕಷ್ಟು ಅಪಘಾತ ನಡೆಯುತ್ತಿದೆ. ಇದಕ್ಕೆ ಹೆದ್ದಾರಿ ನಿರ್ವಹಣೆಹೊತ್ತವರೇ ನೇರ ಜವಾಬ್ದಾರರಾಗಿದ್ದಾರೆ’ ಎಂದು ಹೇಳಿದ್ದಾರೆ.
`ರಸ್ತೆ ಸುರಕ್ಷತೆ ಮತ್ತು ಸಂಚಾರಕ್ಕೆ ಸಂಬAಧಿಸಿ ಆಗುವ ಅಪಘಾತ ಹಾಗೂ ಅವಘಡಗಳಿಗೆ ಗುತ್ತಿಗೆದಾರ, ಹೆದ್ದಾರಿ ಇಲಾಖೆ ಹಾಗೂ ಎಜನ್ಸಿ ವಿರುದ್ಧ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ. ಸಮಸ್ಯೆ ಬಗೆಹರಿಯದೇ ಇದ್ದರೆ ಕಾನೂನು ಹೋರಾಟ ಅನಿವಾರ್ಯ ಎಂದು ದ್ಯಾಮಣ್ಣ ಬೋವಿವಡ್ಡರ್ ಎಚ್ಚರಿಸಿದ್ದಾರೆ. ಮೊದಲ ಹಂತವಾಗಿ ಹೆದ್ದಾರಿ ಹೊಂಡದಲ್ಲಿ ವನಮಹೋತ್ಸವ ಆಚರಿಸಿ ಪ್ರತಿಭಟಿಸುವುದಾಗಿ ಅವರು ಘೋಷಿಸಿದ್ದಾರೆ.
Discussion about this post