ಅಂಕೋಲಾದ ಕಮಲಾಕ್ಷಿ ಭಟ್ಟ ಅವರ ತೋಟದ ಬಾವಿಗೆ ಬಿದ್ದ ಶಂಕರ ಗೌಡ ಅವರು ಸಾವನಪ್ಪಿದ್ದಾರೆ. ಬಾವಿಗೆ ಬಿದ್ದ ದಿನ ಸಾಕಷ್ಟು ಹುಡುಕಾಟ ನಡೆಸಿದರೂ ಸಿಗದ ಶವ ಮರು ದಿನ ನೀರಿನಿಂದ ಮೇಲೆ ಬಂದಿದೆ.
ಅoಕೋಲಾದ ಅಗಸೂರು ಇರಾಣಮೂಲೆಯಲ್ಲಿ ಶಂಕರ ಗೌಡ (46) ಅವರು ವಾಸವಾಗಿದ್ದರು. ಕೃಷಿ ಜೊತೆ ಕೂಲಿ ಕೆಲಸವನ್ನು ಮಾಡಿ ಅವರು ಬದುಕು ನಡೆಸುತ್ತಿದ್ದರು. ಅಗಸ್ಟ 8ರಂದು ಬೆಳಗ್ಗೆ 11ಗಂಟೆ ವೇಳೆಗೆ ಗದ್ದೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಅವರು ಮರಳಿ ಮನೆಗೆ ಬಂದಿದ್ದು ಶವವಾಗಿ.
ಶಂಕರ ಗೌಡ ಅವರು ಹೊಲಕ್ಕೆ ಹೋಗುವಾಗ ದಾರಿಯಲ್ಲಿ ಕಮಲಾಕ್ಷಿ ಭಟ್ಟ ಅವರ ಬಾವಿಯಿದ್ದು, ಆ ಬಾವಿಯಲ್ಲಿ ಕಾಲು ಜಾರಿ ಬಿದ್ದರು. ನೀರು ತುಂಬಿದ ಬಾವಿಯಲ್ಲಿ ಮುಳುಗಿ ಅವರು ನಾಪತ್ತೆಯಾದರು. ಸಂಜೆಯಾದರೂ ಶಂಕರ ಗೌಡ ಅವರು ಮನೆಗೆ ಮರಳದ ಕಾರಣ ಹುಡುಕಾಟ ಶುರುವಾಯಿತು. ಬಾವಿ ಬಳಿ ಹುಡುಕಿದರೂ ಅವರು ಆ ದಿನ ಸಿಗಲಿಲ್ಲ.
ಅಗಸ್ಟ 9ರಂದು ಶಂಕರ ಗೌಡ ಅವರ ಶವ ಬಾವಿಯಲ್ಲಿ ತೇಲುತ್ತಿತ್ತು. ಪತಿ ಸಾವಿನ ಬಗ್ಗೆ ಅರಿತ ಪ್ರೇಮಾ ಗೌಡ ಅವರು ಆಕಸ್ಮಿಕ ಅವಘಡದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.
Discussion about this post