ಮೇಷ ರಾಶಿ: ನಿಮ್ಮ ಒಳಗಿರುವ ಶಕ್ತಿ ನಿಮ್ಮ ಹುಮ್ಮಸ್ಸು ಹೆಚ್ಚಾಗಲು ಕಾರಣ. ಕುಟುಂಬದ ಸಂಬoಧ ಉತ್ತಮವಾಗಿರುತ್ತದೆ. ಹಳೆಯ ಭಯಗಳಿಂದ ಹೊರ ಬನ್ನಿ. ಹೊಸ ಅಧ್ಯಾಯ ಶುರು ಮಾಡಲು ಉತ್ತಮ ದಿನ.
ವೃಷಭ ರಾಶಿ: ನೀವು ನೀಡುವ ಸಲಹೆ ಬೇರೆಯವರಿಗೆ ಅನುಕೂಲ ಮಾಡಿಕೊಡಲಿದೆ. ನಿಮ್ಮಲ್ಲಿನ ಸ್ಪೂರ್ತಿ ಕಥೆಗಳು ಪ್ರೇರಣೆ ನೀಡಲಿದೆ. ಸ್ನೇಹಿತರ ಜೊತೆ ಮುಕ್ತವಾಗಿ ಮಾತನಾಡಿ. ಸೃಜನಶೀಲತೆಯ ಕೆಲಸದಿಂದ ಗೆಲುವು ಸಾಧ್ಯ.
ಮಿಥುನ ರಾಶಿ: ಸಂಪತ್ತು ಅಭಿವೃದ್ಧಿಗಾಗಿ ಸರಿಯಾದ ಕಡೆ ಹೂಡಿಕೆ ಮಾಡಿ. ನಿಮ್ಮಲ್ಲಿರುವ ನೈಜತೆ ಬೇರೆಯವರ ಗಮನಸೆಳೆಯಲಿದೆ. ವೃತ್ತಿಪರ ಬೆಳವಣಿಗೆಗೆ ಈ ದಿ ಸಹಕಾರಿ.
ಕರ್ಕ ರಾಶಿ: ನಿಮ್ಮ ಜೀವನಶೈಲಿಯಲ್ಲಿ ಶಿಸ್ತು ಅತಿ ಮುಖ್ಯ. ನಿಮ್ಮದೇ ಆದ ನಿಯಮಗಳನ್ನು ಅನುಸರಿಸಿ. ಸಂವೇಧನಾಶೀಲತೆಯಿoದ ಕೆಲಸ ಮಾಡಿ.
ಸಿಂಹ ರಾಶಿ: ಸಾಮಾಜಿಕ ನಿರೀಕ್ಷೆಗಳನ್ನಿಟ್ಟುಕೊಳ್ಳಬೇಡಿ. ಹಣಕಾಸು ವಿಶ್ಲೇಷಣೆಗೆ ಉತ್ತಮ ಸಮಯ. ಸಾಮಾಜಿಕ ಜಾಲತಾಣ ಬಳಕೆ ಮಿರಿಯಿರಲಿ.
ಕನ್ಯಾ ರಾಶಿ: ಮನಸ್ಸಿನೊಳಗಿನ ಬದಲಾವಣೆಗಳನ್ನು ಸ್ವೀಕರಿಸಿ. ಸಾಧನೆ ಮಾಡಲು ಒಳ್ಳೆಯ ಸಮಯ. ಹೃದಯಸ್ಪರ್ಶಿ ಸಂವಾದ ಸಂಪರ್ಕ ಹೆಚ್ಚಿಸುತ್ತದೆ.
ತುಲಾ ರಾಶಿ: ಮಹತ್ವಾಕಾಂಶೆ ಈಡೇರಿಕೆಗೆ ಪ್ರಯತ್ನ ಅಗತ್ಯ. ಸಂಬAಧದಲ್ಲಿ ಸ್ಪಷ್ಟತೆ ಹಾಗೂ ಸಮನ್ವಯತೆ ಬೇಕು. ವ್ಯವಹಾರದಲ್ಲಿ ಎಚ್ಚರಿಕೆಯಿರಲಿ.
ವೃಶ್ಚಿಕ ರಾಶಿ: ನಿಮ್ಮ ಆತ್ಮವಿಶ್ವಾಸವೇ ನಿಮಗೆ ಶಕ್ತಿ. ಹೊಸ ಗುರಿಗಳನ್ನು ಸಾಧಿಸಿ. ಹೊಸ ಅವಕಾಶ ಸಿಕ್ಕಾಗ ಅದನ್ನು ಬಳಸಿ.
ಧನು ರಾಶಿ: ಆಂತರಿಕ ಸಂಬoಧದಲ್ಲಿ ಗೌರವ ಸಿಗಲಿದೆ. ಧೀರ್ಘಕಾಲಿಕ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ದಿನ. ಮನಸ್ಸು ಶಾಂತವಾಗಿರಲಿದೆ.
ಮಕರ ರಾಶಿ: ಆರೋಗ್ಯದ ಬಗ್ಗೆ ಗಮನಹರಿಸಿ. ಹೊಸ ಜವಾಬ್ದಾರಿಯನ್ನು ಸ್ವೀಕರಿಸಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಕುಂಭ ರಾಶಿ: ವೈಯಕ್ತಿಕ ಉನ್ನತಿ ಸಾಧ್ಯ. ಸಂಪನ್ಮೂಲ ನಿರ್ವಹಣೆ ಸರಿಯಾಗಿ ಮಾಡುವುದು ಮುಖ್ಯ. ನಿಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳಿ.
ಮೀನ: ಜೀವನದಲ್ಲಿ ನಯವಾದ ಬದಲಾವಣೆ ಆಗಲಿದೆ. ಕುಟುಂಬದಲ್ಲಿ ಸಮೃದ್ಧಿ ಸಾಧ್ಯವಿದೆ. ಧೈರ್ಯವೇ ನಿಮಗೆ ಶಕ್ತಿ ಎಂಬುದನ್ನು ನೆನಪಿಡಿ.
Discussion about this post