ಮೀನು ಹಿಡಿಯಲು ಯಲ್ಲಾಪುರದ ಯುವಕರಿಬ್ಬರು ನೀರುಪಾಲಾಗಿದ್ದಾರೆ. ಮೀನು ಹಿಡಿದು ಹಿಂತಿರುಗುವ ವೇಳೆ ಏಕಾಏಕಿ ಹಳ್ಳದ ನೀರು ಹೆಚ್ಚಾಗಿದ್ದರಿಂದ ಅವರಿಬ್ಬರು ಕಣ್ಮರೆಯಾಗಿದ್ದಾರೆ.
ಭಾನುವಾರ ಸಂಜೆ ಮಂಚಿಕೇರಿ ಬಳಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಮಹಮ್ಮದ ರಫೀಖ್ ಇಬ್ರಾಹಿಂ ಸಾಬ್ ಸೈಯದ್ (27) ಹಾಗೂ ಅವರ ತಮ್ಮ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ (25) ಇನ್ನಿತರ ಆರು ಜನರ ಜೊತೆ ಮೀನು ಹಿಡಿಯಲು ಹೋಗಿದ್ದರು.
ಮಾದನಸರ ಕೆರೆ ಹೊಸಳ್ಳಿ ಕವಲೆಕರೆಯ ಸಮೀಪ ಬೇಡ್ತಿ ನದಿ ಸೇರುವ ಕವಳಗಿ ಹಳ್ಳ ದಾಟಿದ್ದ ಅವರು ಮೀನು ಹಿಡಿದು ಹಿಂತಿರುಗುವಾಗ ಏಕಾಏಕಿ ಹಳ್ಳದ ನೀರು ಹೆಚ್ಚಾಯಿತು. ಆ ನೀರಿನಲ್ಲಿ ಅವರಿಬ್ಬರು ಕೊಚ್ಚಿಹೋದರು.
ಉಳಿದ ಆರು ಜನ ಸುರಕ್ಷಿತವಾಗಿದ್ದು, ಅವರೇ ಎಲ್ಲಡೆ ಈ ಸುದ್ದಿ ಹರಡಿದರು. ಹೀಗಾಗಿ ಊರಿನವರು ಬಂದು ಹುಡುಕಾಟ ನಡೆಸಿದರು. ಆದರೆ, ಎಲ್ಲಿಯೂ ಅವರಿಬ್ಬರು ಸಿಗದ ಕಾರಣ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ರಾತ್ರಿಯಾದರೂ ಅವರಿಬ್ಬರ ಸುಳಿವು ಸಿಕ್ಕಿಲ್ಲ.
Discussion about this post