ರೆನಾಲ್ಡ್ ಕ್ವಿಡ್ ಕಾರಿನಲ್ಲಿ ಭಟ್ಕಳ ಪ್ರವೇಶಿಸುತ್ತಿದ್ದ 1.700 ಕೆಜಿ ಗಾಂಜಾವನ್ನು ಪೊಲೀಸರು ತಡೆದಿದ್ದಾರೆ. ಗಾಂಜಾ ಜೊತೆ ಸಾಗಾಟಕ್ಕೆ ಬಳಸಿದ್ದ ಕಾರನ್ನು ಜಪ್ತು ಮಾಡಿ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹೊನ್ನಾವರ ಕಾಸರಕೋಡಿನ ಸಯ್ಯದ್ ಗುಲ್ಜಾರ್ ಹಾಗೂ ಸಯ್ಯದ್ ಮುಕ್ತಿಯಾರ್ ತಮ್ಮ ಕ್ವಿಡ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದರು. ಇದನ್ನು ಅರಿತ ಪಿಎಸ್‌ಐ ನವೀನ ನಾಯ್ಕ ಮಾದಕ ವ್ಯಸನ ಗ್ರಾಹಕರ ಕೈಗೆ ಸೇರುವುದನ್ನು ತಡೆದರು. ಪೊಲೀಸರು ಕಾರನ್ನು ಅಡ್ಡಹಾಕಿದಾಗ ಕಾರಿನಲ್ಲಿದ್ದ ಸಯ್ಯದ್ ಗುಲ್ಜಾರ್ ತಮ್ಮ ವೋಟರ್ ಕಾರ್ಡ, ಪಾನ್ ಕಾರ್ಡ ಹಾಗೂ ಪರ್ಸನ್ನು ಬಿಟ್ಟು ಓಡಿದರು. ಸಯ್ಯದ್ ಮುಕ್ತಿಯಾರ್ ಸಿಕ್ಕಿ ಬಿದ್ದರು.
5 ಲಕ್ಷ ರೂ ಬೆಲೆಯ ಕಾರನ್ನು ಜಪ್ತು ಮಾಡಿದ ಪೊಲೀಸರು ಓಡಿ ಹೋದ ಸಯ್ಯದ್ ಗುಲ್ಜಾರ್’ನ ಶೋಧ ನಡೆಸಿದರು. ಆತ ಸಿಗದಿದ್ದರೂ ಸಯ್ಯದ್ ಮುಕ್ತಿಯಾರ್ ಜೊತೆ ಸಯ್ಯದ್ ಗುಲ್ಜಾರ್ ಹೆಸರನ್ನು ಸೇರಿಸಿ ಪ್ರಕರಣ ದಾಖಲಿಸಿದರು. ಪೊಲೀಸರು ವಶಕ್ಕೆಪಡೆದ ಗಾಂಜಾ 50 ಸಾವಿರ ರೂ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ತೂಕ ಮಾಡುವ ಯಂತ್ರ ಸೇರಿ ವಿವಿಧ ವಸ್ತುಗಳು ಗಾಂಜಾ ಜೊತೆ ಪತ್ತೆಯಾಗಿವೆ. ಪಿಎಸ್‌ಐ ತಿಮ್ಮಪ್ಪ ಎಸ್ ಪ್ರರಕಣದ ತನಿಖೆ ನಡೆಸುತ್ತಿದ್ದಾರೆ.
Discussion about this post