ಕಾರವಾರದ ಬೈತಖೋಲದಲ್ಲಿ ಮೀನು ಹಿಡಿಯಲು ಹೋಗಿದ್ದ ತಿಲಕ ದೇವಾಗೌಡ ಮಾಯವಾಗಿದ್ದಾರೆ. ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿಲ್ಲ.
ಬಿಣಗಾದ ಒಕ್ಕಲಕೇರಿಯಲ್ಲಿ ವಾಸವಾಗಿದ್ದ ತಿಲಕ ದೇವಾಗೌಡ (46) ನೇವಲ್ ಬೇಸ್’ನಲ್ಲಿ ಉದ್ಯೋಗದಲ್ಲಿದ್ದರು. ಅಗಸ್ಟ 10ರ ಮಧ್ಯಾಹ್ನ ಅವರು ಮೀನು ಹಿಡಿಯುವುದಕ್ಕಾಗಿ ಬೈತಖೋಲ್’ಗೆ ಬಂದಿದ್ದರು. ಅಲ್ಲಿನ ಲೇಡಿಸ್ ಬೀಚ್’ನಲ್ಲಿ ಮೀನಿಗೆ ಗಾಳ ಹಾಕಿದ್ದರು.
ಮಧ್ಯಾಹ್ನ 3.30ರವರೆಗೂ ಅವರು ಅಲ್ಲಿ ಮೀನು ಹಿಡಿಯುತ್ತಿದ್ದನ್ನು ಜನ ನೋಡಿದ್ದರು. ಅದಾದ ನಂತರ ತಿಲಕ ದೇವಾ ಗೌಡ ಅವರು ಯಾರ ಕಣ್ಣಿಗೂ ಬೀಳಲಿಲ್ಲ. ಆ ದಿನ ಅವರು ಮನೆಗೂ ಹೋಗಿ ತಲುಪಲಿಲ್ಲ. ದೇವಳಮಕ್ಕಿಯಲ್ಲಿ ವಾಸವಾಗಿರುವ ಅವರ ಸಹೋದರ ಕಮಲಾಕರ ದೇವಾಗೌಡ ಅವರು ಕಾರವಾರಕ್ಕೆ ಆಗಮಿಸಿ ಹುಡುಕಾಟ ನಡೆಸಿದರು.
ಬೈತಖೋಲ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದರೂ ತಿಲಕ ದೇವಾಗೌಡ ಅವರು ಸಿಗಲಿಲ್ಲ. ಹೀಗಾಗಿ ಕಮಲಾಕರ ದೇವಾಗೌಡ ಅವರು ಪೊಲೀಸರ ಮೊರೆ ಹೋದರು. ಪ್ರಕರಣ ದಾಖಲಿಸಿಕೊಮಡ ಪೊಲೀಸರು ಇದೀಗ ಶೋಧಕಾರ್ಯ ನಡೆಸಿದ್ದಾರೆ.
Discussion about this post