ಮೇಷ ರಾಶಿ: ಸಕಾರಾತ್ಮಕ ಶಕ್ತಿ ಹೆಚ್ಚಳವಾಗಲಿದೆ. ಅವಕಾಶಗಳು ಅರೆಸಿ ಬರಲಿದೆ. ಸವಾಲುಗಳಲ್ಲಿ ಯಶಸ್ಸು ಸಾಧ್ಯ. ನಾಯಕತ್ವ ಗುಣದಿಂದ ಮುನ್ನಡೆಯಿರಿ. ಆಥಿಕ ಹೂಡಕೆಗಳಿಂದ ಲಾಭ ಸಾಧ್ಯ.
ವೃಷಭ ರಾಶಿ: ವೃತ್ತಿ ಜೀವನದಲ್ಲಿ ಸಿಗುವ ಅವಕಾಶವನ್ನು ಬಳಸಿಕೊಳ್ಳಿ. ಧನಾತ್ಮಕ ಬೆಳವಣಿಗೆಯನ್ನು ಸ್ವಾಗತಿಸಿ. ಮನೆಯಲ್ಲಿ ಸುಖ-ಶಾಂತಿಯ ವಾತಾವರಣ ಸಿಗಲಿದೆ.
ಮಿಥುನ ರಾಶಿ: ಬಿಕ್ಕಟ್ಟು ಎದುರಾದಾಗಾ ತಾಳ್ಮೆಯಿಂದ ನಿಭಾಯಿಸಿ. ಹೊಸ ವ್ಯಕ್ತಿಗಳ ಪರಿಚಯ ಆಗಲಿದೆ. ಕೆಲಸದ ವಿಷಯದಲ್ಲಿ ಹೊಸ ವಿಧಾನ ಅನುಸರಿಸುವುದು ಉತ್ತಮ.
ಕರ್ಕ ರಾಶಿ: ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ. ವೈಯಕ್ತಿಕ ಬೆಳವಣಿಗೆ ಬಗ್ಗೆ ಗಮನಹರಿಸಿ. ಮನೆಯವರ ಸಹಕಾರದಿಂದ ಯಶಸ್ಸು ಸಿಗಲಿದೆ.
ಸಿಂಹ ರಾಶಿ: ಸಂತೋಷದ ಕ್ಷಣಗಳನ್ನು ಅನುಭವಿಸಿ. ನಿಮ್ಮ ಶಕ್ತಿಯ ಬಗ್ಗೆ ಸುತ್ತಲಿರುವವರಿಂದ ಮೆಚ್ಚುಗೆ ಸಿಗಲಿದೆ. ಕೆಲಸದ ಹೊರೆಗಳ ಬಗ್ಗೆ ಚಿಂತಿಸಿ, ಸಮಸ್ಯೆ ನಿಭಾಯಿಸಿ.
ಕನ್ಯಾ ರಾಶಿ: ಕೆಲಸದಲ್ಲಾಗುವ ತೊಂದರೆಗಳನ್ನು ಎದುರಿಸುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಮನೆಯಲ್ಲಿನ ಆಗು-ಹೋಗುಗಳಿಗೆ ಸ್ಪಂದನೆ ಮುಖ್ಯ.
ತುಲಾ ರಾಶಿ: ಸಂಜೆ ವೇಳೆ ಮನೆಯಲ್ಲಿ ಜಗಳ ಮಾಡುವುದು ಸರಿಯಲ್ಲ. ಸಿಟ್ಟು ನಿಮಗೆ ಒಳ್ಳೆಯದಲ್ಲ. ವಿಭಿನ್ನವಾಗಿ ಚಿಂತಿಸಿ ಮುನ್ನಡೆಯಿರಿ.
ವೃಶ್ಚಿಕ ರಾಶಿ: ವೃತ್ತಿ ಹಾಗೂ ಹಣಕಾಸು ವಿಷಯದಲ್ಲಿ ಪ್ರಗತಿ ಆಗಲಿದೆ. ಆರೊಗ್ಯ ಚನ್ನಾಗಿರಲು ಆಹಾರದ ಬಗ್ಗೆ ಗಮನಹರಿಸಿ. ವ್ಯಾಯಾಮ ಮಾಡಲು ಮರೆಯದಿರಿ. ಕುಟುಂಬದ ಜೊತೆ ಕಾಲ ಕಳೆಯಿರಿ.
ಧನು ರಾಶಿ: ಶ್ರಮ ಅಧಿಕವಾದಾಗ ವಿಶ್ರಾಂತಿ ಅಗತ್ಯ. ಧೂಮಪಾನ ಹಾಗೂ ಮಾದಕ ವ್ಯಸನಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಹಣದ ಆಗಮನ ಆಗಲಿದೆ.
ಮಕರ ರಾಶಿ: ಸಕಾರಾತ್ಮಕ ಯೋಜನೆಯೇ ನಿಮಗೆ ಶಕ್ತಿ ಕೊಡಲಿದೆ. ಉಳಿತಾಯದ ಬಗ್ಗೆ ಸಲಹೆಪಡೆದು ಯೋಜನೆ ರೂಪಿಸಿ. ಸಾಮಾಜಿಕ ಬದ್ಧತೆಗಳ ಕಡೆ ಗಮನವಿರಲಿ.
ಕುಂಭ ರಾಶಿ: ವ್ಯಾಪಾರ ಹಾಗೂ ವೃತ್ತಿಯಲ್ಲಿ ಹೊಸ ಅವಕಾಶ ಸಿಗಲಿದೆ. ಆರೋಗ್ಯ ವಿಷಯದಲ್ಲಿ ಜಾಗೃತಿ ಬೇಕು. ಹಣಕಾಸು ವಿಷಯದಲ್ಲಿಯೂ ದುಡುಕುತನ ಬೇಡ.
ಮೀನ ರಾಶಿ: ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡಿ. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಮಕ್ಕಳ ಜೊತೆ ಕಾಲ ಕಳೆಯಿರಿ.
Discussion about this post