ನಗರಸಭೆ ಸದಸ್ಯರಿಂದಲೇ ಪೈಪ್ ಕಳ್ಳತನ, ಲಂಚಾವತಾರ ನಡೆದಿದ್ದರೂ ಆರೋಪಿತರ ವಿರುದ್ಧ ಕಠಿಣ ಕ್ರಮವಾಗದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು, ಇದೇ ವಿಷಯ ಮಂಗಳವಾರದ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಈ ವಿಷಯ ಪ್ರಸ್ತಾಪಿಸಿದ್ದರಿಂದ ಇನ್ನಿತರ ಕೆಲ ಸದಸ್ಯರು ಸಿಡಿಮಿಡಿಗೊಂಡರು. `ಸರ್ವೇ ನಂಬರ 73ರಲ್ಲಿ ಶಿರಸಿ ನಗರ ಸಭೆಯ ಸುಂದರ ಕಟ್ಟಡ ಕಟ್ಟಬೇಕು ಎಂದು ನಿರ್ಧರಿಸಲಾಗಿತ್ತು. ಈಗ ಅದರ ಕತೆ ಏನಾಗಿದೆ?’ ಎಂದು ಪ್ರದೀಪ ಶೆಟ್ಟಿ ಪ್ರಶ್ನಿಸಿದರು. ಸರಿಯಾದ ಉತ್ತರ ಸಿಗದಿದ್ದಾಗ `ಬಿಜೆಪಿ ಆಡಳಿತದಲ್ಲಿ ನಗರಸಭೆ ಪೈಪು ಕಳ್ಳತನ ನಡೆದಿದೆ. ಸದಸ್ಯರು ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ಅಂಥವರ ವಿರುದ್ಧ ನೀವು ಏನು ಕ್ರಮ ಜರುಗಿಸಿದ್ಧೀರಿ?’ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
`ನಗರಸಭೆಯನ್ನು ಆರೋಪಗಳ ಮೇಲೆ ಆರೋಪ ಸುತ್ತುವರೆದಿದೆ. ಆದರೆ, ಕೆಲವರು ಕಾಲಹರಣ ಮಾಡುತ್ತ ಬಂದಿದ್ದು, 5 ವರ್ಷದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ’ ಎಂದು ಕಿಡಿಕಾರಿದರು. `ಅಧ್ಯಕ್ಷರಿಂದ ನಮಗೆ ಸಮರ್ಪಕವಾದ ಉತ್ತರ ಬರುವವರೆಗೆ ಇಲ್ಲಿಂದ ನಾವು ಕದಲುವುದಿಲ್ಲ’ ಎಂದು ಅವರು ಪಟ್ಟುಹಿಡಿದರು. `ನಗರದ ರಸ್ತೆಗಳು ಗುಂಡಿಗಳಿAದ ಕೂಡಿದೆ’ ಎಂಬ ವಿಷಯ ಪ್ರಸ್ತಾಪವಾದಾಗ ಅದೂ ಕಲಹಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರ ಮಾತಿಗೆ ವಿರೋಧ ಪಕ್ಷದ ಸದಸ್ಯರು `ನಿಮ್ಮದೇ ಪಕ್ಷದ ಸದಸ್ಯರು ನಿಮ್ಮ ಆಡಳಿತ ಕುರಿತು ಮಾತನಾಡುತ್ತಿದ್ದಾರೆ’ ಎಂದಾಗ ವಾಕ್ಸಮರ ನಡೆಯಿತು.
ಸಭೆಯಲ್ಲಿದ್ದ ಕಾಂಗ್ರೆಸ್ ಸದಸ್ಯರು `ಟೆಂಡರ್ ಮತ್ತು ಹಣಕಾಸಿನ ವ್ಯವಹಾರಕ್ಕೆ ಸಂಬAಧಿಸಿದAತೆ ಜನರ ತೆರಿಗೆ ಹಣದಲ್ಲಿ ದುಂದು ವೆಚ್ಚ ಮಾಡುತ್ತಿದೆ’ ಎಂದು ದೂರಿದರು. ಅಧ್ಯಕ್ಷರು ಸದಸ್ಯರನ್ನು ಸಮಾಧಾನ ಮಾಡಿದರು. ಕೊನೆಗೆ ಪ್ರಭಾರಿ ಪೌರಾಯಕ್ತರಾದ ಶಿವರಾಜ ಅವರು ಮಾತನಾಡಿ `ಇನ್ನು ಮುಂದೆ ನಗರ ಸಭೆಯಲ್ಲಿ ಕಮ್ಯಾಂಡ್ ರೂಮ್ ಸ್ಥಾಪಿಸಿ ಸಿಸಿ ಕ್ಯಾಮರಾಗಳ ಮೂಲಕ ನಗರದಲ್ಲಿನ ಆಗು ಹೋಗುಗಳ ದೃಶ್ಯಗಳನ್ನು ನಾವು ನಗರ ಸಭೆಯಲ್ಲಿಯೇ ಕುಳಿತು ವೀಕ್ಷಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ಸಮಜಾಯಿಶೀ ನೀಡಿದರು.
Discussion about this post