ಶಿರಸಿ – ಯಲ್ಲಾಪುರ ರಸ್ತೆ ತುಂಬ ಗುಂಡಿ ತುಂಬಿದ್ದು, ಇದರಿಂದ ಆಕ್ರೋಶಗೊಂಡ ಜನ ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟಿಸುತ್ತಿದ್ದಾರೆ. ಉಮ್ಮಚ್ಗಿ ಬಳಿಯ ಚವತ್ತಿ ಹಾಗೂ ಉಪಳೇಶ್ವರ ಬಳಿಯ ಸವಣಗೇರಿಯಲ್ಲಿ ಊರಿನವರು ಬಾಳೆ ಗಿಡ ನೆಟ್ಟಿದ್ದಾರೆ.
ರಸ್ತೆಯಲ್ಲಿ ಬಾಳೆ ಗಿಡ ನೆಟ್ಟವರು ಯಾರು ಎಂದು ಯಾರಿಗೂ ಗೊತ್ತಾಗಿಲ್ಲ. ಈ ಎರಡು ಊರಿನಲ್ಲಿ ಬೇರೆ ಬೇರೆ ವ್ಯಕ್ತಿ ಹಾಗೂ ಬೇರೆ ಬೇರೆ ಗುಂಪಿನವರೇ ಬಾಳೆ ಗಿಡ ನೆಟ್ಟು ಆಕ್ರೋಶವ್ಯಕ್ತಪಡಿಸಿದ್ದು, ರಸ್ತೆ ಗುಂಡಿ ಮುಚ್ಚಬೇಕಾದ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ.
ಬಹುತೇಕ ಎಲ್ಲಾ ಗುತ್ತಿಗೆಗಳಲ್ಲಿಯೂ `ರಸ್ತೆ ಡಾಂಬರೀಕರಣ, 5 ವರ್ಷದ ನಿರ್ವಹಣೆ ಹಾಗೂ 6ನೇ ವರ್ಷಕ್ಕೆ ಮರುಡಾಂಬರೀಕರಣ ಮಾಡಬೇಕು’ ಎಂಬ ಷರತ್ತು ವಿಧಿಸಲಾಗುತ್ತದೆ. ಅದಕ್ಕಾಗಿಯೇ ದರಪಟ್ಟಿ ಆಹ್ವಾನಿಸಿ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುತ್ತದೆ. ಆದರೆ, ಶಿರಸಿ – ಯಲ್ಲಾಪುರ ರಸ್ತೆ ಡಾಂಬರೀಕರಣ ನಡೆದು ಐದು ವರ್ಷ ಕಳೆಯುವುದರೊಳಗೆ ಗುಂಡಿಗಳಿAದ ಕೂಡಿದೆ. ರಸ್ತೆ ನಿರ್ವಹಣೆ ಮಾಡುವುದಾಗಿ ಬರೆದುಕೊಟ್ಟ ಗುತ್ತಿಗೆದಾರರು ಕಾಣೆಯಾಗಿದ್ದಾರೆ.
ರಸ್ತೆ ಗುಂಡಿ ಕಾರಣ ಅನೇಕ ಅಪಘಾತಗಳು ನಡೆದಿದೆ. ಹಲವರು ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ. ರಸ್ತೆ ಗುಂಡಿಯ ಆಳ-ಅಗಲದ ಲೆಕ್ಕ ಸಿಗದೇ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರಲ್ಲಿಯೂ ದ್ವಿಚಕ್ರ ವಾಹನ ಓಡಿಸುವವರು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಸದ್ಯ ಯಲ್ಲಾಪುರ – ಶಿರಸಿ ರಾಜ್ಯ ಹೆದ್ದಾರಿ ಬಹುತೇಕ ಕಡೆ ಹದಗೆಟ್ಟಿದೆ. ಎಲ್ಲೆಂದರಲ್ಲಿ ಹೊಂಡ-ಗುAಡಿಗಳು ಕಾಣುತ್ತಿವೆ. ಇದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದು, ಚವತ್ತಿಯಿಂದ ತಾರೇಹಳ್ಳಿ ಕ್ರಾಸಿನವರೆಗೆ ಸಂಚಾರ ಕಷ್ಟವಾಗಿದೆ. ಸವಣಗೇರಿ ಪ್ರದೇಶದಲ್ಲಿ ಸಹ ಹೊಂಡಗಳ ಪ್ರಮಾಣ ಅಧಿಕವಾಗಿದೆ. ಈ ಹಿನ್ನಲೆ ಈ ಎರಡು ಕಡೆ ರಸ್ತೆ ಮೇಲೆ ಬಾಳೆ ಗಿಡ ನೆಟ್ಟು ಜನ ಪ್ರತಿಭಟಿಸಿದ್ದಾರೆ.
Discussion about this post