ಪಾರಂಪರಿಕ ಸತ್ವವೇ ಇದರ ರಹಸ್ಯ
ನಿಮ್ಮ ಮನೆಯಲ್ಲಿ ಐದು ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿದ್ದಾರಾ? ಹಾಗಿದ್ದರೆ, ಅವರನ್ನು ಒಮ್ಮೆ ಡಾ ಜಿಪಿ ಭಟ್ಟ ಮದ್ಗುಣಿ ಸ್ಮಾರಕ ಆಯುರ್ ಸೇವಾ ಭವನದ ವೈದ್ಯಾಧಿಕಾರಿ ಡಾ ಸುಚೇತಾ ಮದ್ಗುಣಿ ಅವರಲ್ಲಿ ಕರೆತನ್ನಿ!
ಮಕ್ಕಳಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳ, ಆಗಾಗ ಕಾಡುವ ರೋಗಗಳ ನಿವಾರಣೆಗೆ ಇಲ್ಲಿ ಗಿಡಮೂಲಿಕೆಗಳ ಔಷಧಿಯಿದೆ. ನೆನಪಿನ ಶಕ್ತಿ ವೃದ್ದಿ, ಮಕ್ಕಳಲ್ಲಿನ ಹಠ ಹಾಗೂ ಚಂಚಲ ಸ್ವಭಾವ, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ, ದೃಷ್ಠಿದೋಷ ಹಾಗೂ ಇನ್ನಿತರ ಅಲರ್ಜಿಗಳನ್ನು ಸಹ ಈ `ಸ್ವರ್ಣಬಿಂಧು ಪ್ರಾಶನ’ದಿಂದ ದೂರವಾಗುತ್ತದೆ.
ಪುರಾತನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದಲ್ಲಿ ಆಚಾರ್ಯ ಕಾಶ್ಯಪರು ಸ್ವರ್ಣಪ್ರಾಶನ ವಿಧಿಯ ಬಗ್ಗೆ ಕಾಶ್ಯಪ ಸಂಹಿತಾದಲ್ಲಿ ವಿವರಿಸಿದ್ದು, ಡಾ ಸುಚೇತಾ ಮದ್ಗುಣಿ ಅವರು ಇದನ್ನು ಅಧ್ಯಯನ ನಡೆಸಿದ್ದಾರೆ. ಬಂಗಾರದ ಭಸ್ಮವನ್ನು ತುಪ್ಪದಲ್ಲಿ ಮಿಶ್ರಣ ಮಾಡಿ ಪುಷ್ಯ ನಕ್ಷತ್ರದಂದು ಮಗುವಿಗೆ ಎರಡು ಹನಿ ಉಣಿಸುವ ಪ್ರಕ್ರಿಯೆಯೇ ಸ್ವರ್ಣಾಮೃತಬಿಂಧು ಪ್ರಾಶನ.
ಮಗು ಹುಟ್ಟಿದ ಒಂದು ತಿಂಗಳಿನಿ0ದ ಹಿಡಿದು 16 ವರ್ಷದವರೆಗಿನ ಮಕ್ಕಳಿಗೆ ಈ ಚಿಕಿತ್ಸೆ ಸೂಕ್ತ. ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಮಾಡುವುದು ವೈಜ್ಞಾನಿಕವಾಗಿಯೂ ಶ್ರೇಷ್ಠ. ಡಾ ಮದ್ಗುಣಿಯವರು ಗಿಡಮೂಲಕೆಗಳಿಂದ ಸ್ವತಃ ಔಷಧಿಗಳನ್ನು ತಯಾರಿಸುತ್ತಾರೆ. ಗಿಡಗಳನ್ನು ಗ್ರಾಮೀಣ ಭಾಗದಲ್ಲಿ ವಾಸಿಸುವ ಗುಡ್ಡಗಾಡು ಜನರಿಂದ ಸಂಗ್ರಹಿಸುತ್ತಾರೆ.
ಇನ್ನೂ, 1955ರಲ್ಲಿ ಸ್ಥಾಪನೆಯಾದ ಡಾ ಮದ್ಗುಣಿ ಆಸ್ಪತ್ರೆ ಇದೀಗ ಯಲ್ಲಾಪುರ ತಾಲೂಕಿನ ಶಿರಸಿ ರಸ್ತೆಯಲ್ಲಿರುವ ಕೆಇಬಿ ಎದುರು ಕಾರ್ಯ ನಿರ್ವಹಿಸುತ್ತಿದೆ. `ಆಯುರ್ ಸೇವಾ ಭವನ’ವೂ ಸ್ವರ್ಣಾಮೃತ ಬಿಂದು ಪ್ರಾಶನ ಹಾಗೂ ಶುದ್ಧ ಆಯುರ್ವೇದ ಚಿಕಿತ್ಸಾ ಪದ್ಧತಿ’ಯಿಂದ ಪ್ರಸಿದ್ಧಿ ಪಡೆದಿದೆ. ಮೂಲತಃ ಕುಮಟಾ ಮದ್ಗುಣಿಯವರಾದ ಆಯುರ್ವೇದ ತಜ್ಞ ಡಾ ಜಿ ಪಿ ಭಟ್ಟ ಮದ್ಗುಣಿ ಅವರು ದಾಂಡೇಲಿಯಲ್ಲಿ ಆಸ್ಪತ್ರೆ ಸ್ಥಾಪಿಸುವ ಚಿಂತನೆಯಲ್ಲಿದ್ದರು. ಆ ವೇಳೆ ಯಲ್ಲಾಪುರದಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದಿರುವುದನ್ನು ಅರಿತು ಇಲ್ಲಿನ ದೇವಿ ಮೈದಾನದ ಬಳಿ ಆಸ್ಪತ್ರೆ ಶುರು ಮಾಡಿದರು. 1960ರ ದಶಕದಲ್ಲಿ ಕಳಚೆಯಂಥ ಗುಡ್ಡಗಾಡು ಪ್ರದೇಶಗಳಿಗೂ ಸೈಕಲ್ ಮೇಲೆ ಸಂಚರಿಸಿ ಅವರು ಜನರಿಗೆ ಚಿಕಿತ್ಸೆ ನೀಡುತ್ತಿದ್ದರು.
ಇದೀಗ ಅವರ ಸೊಸೆ ಡಾ ಸುಜೇತಾ ಮದ್ಗುಣಿ ಅವರು ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದಾರೆ. `ಡಾ ಜಿಪಿ ಭಟ್ಟ ಸ್ಮಾರಕ ಆಯುಷ್ ಸೇವಾ ಟ್ರಸ್ಟ್’ ಮೂಲಕ ಆಯುರ್ವೇದ ಸೇವೆ, ಆರೋಗ್ಯ ಶಿಕ್ಷಣ ಹಾಗೂ ಆಯುರ್ವೇದ ಶಿಬಿರ, ಆಯುರ್ವೇದ ಮಾಹಿತಿ, ದೇಶಿ ಸಂಸ್ಕೃತಿ ಮತ್ತು ಯೋಗದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.ಸ್ಥಳೀಯ ಮಾತ್ರವಲ್ಲದೇ, ಹೊರ ಪ್ರದೇಶದವರು ಸಹ ವೆಬ್ https://www.drmadguniayurseva.com ಮೂಲಕ ಸಂಪರ್ಕಿಸಿ ಬರುತ್ತಾರೆ. ಚಿಕಿತ್ಸೆಗೆ ಬರುವವರು 8088008754ಗೆ ಕರೆ ಮಾಡಿ ಬರುವುದು ಉತ್ತಮ. ಅಂದ ಹಾಗೇ, ಐದು ವರ್ಷದ ಒಳಗಿನ ಮಕ್ಕಳ ಸ್ವರ್ಣಬಿಂಧು ಪ್ರಾಶನಕ್ಕೆ ಸೇವಾ ಶುಲ್ಕ 100ರೂ ಮಾತ್ರ. ಇಲ್ಲಿ `ಪಂಚಕರ್ಮ’ ಚಿಕಿತ್ಸೆ ಸಹ ಲಭ್ಯ. `ಸ್ವರ್ಣಾಮೃತಬಿಂಧು ಪ್ರಾಶನದಿಂದ ನನ್ನ ಮಗುವಿನ ಆರೋಗ್ಯ ಸಾಕಷ್ಟು ಸುಧಾರಣೆಯಾಗುವುದನ್ನು ಗಮನಿಸಿದ್ದೇನೆ’ ಎಂದು ಜಂಬೇಸಾಲಿನ ಶ್ರೀಲತಾ ರಾಜೀವ ಹೆಗಡೆ ಅನುಭವ ಹಂಚಿಕೊ0ಡರು.
#Sponsored