ಹಾವು ಕಚ್ಚಿದ ವಿಷಯ ಕೇಳಿ ಆಘಾತಕ್ಕೆ ಒಳಗಾಗಿರುವ ಕುಮಟಾದ ರಮೇಶ ಪಟಗಾರ ಅವರಿಗೆ ನೆರವು ನೀಡುವಂತೆ ಕೋರಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಮೊರೆ ಹೋಗಿದ್ದಾರೆ.
Advertisement. Scroll to continue reading.
ಭಟ್ಕಳ ಆಡಳಿತ ಸೌಧದಲ್ಲಿ ಮಂಕಾಳು ವೈದ್ಯ ಅವರನ್ನು ಆಗ್ನೇಲ್ ರೋಡ್ರಿಗಸ್ ಅವರು ಭೇಟಿ ಮಾಡಿದರು. `ಸಿದ್ದಾಪುರದಲ್ಲಿ ಕೆಲಸ ಮಾಡುವಾಗ ರಮೇಶ ಪಟಗಾರ ಅವರಿಗೆ ಹಾವು ಕಚ್ಚಿದ್ದು, ಅಧಿಕ ರಕ್ತದ ಒತ್ತಡದಿಂದ ಅವರು ಆಸ್ಪತ್ರೆ ಸೇರಿದ ಬಗ್ಗೆ ವಿವರಿಸಿದರು. ಆಸ್ಪತ್ರೆಯವರು 7 ಲಕ್ಷ ರೂ ಬಿಲ್ ಮಾಡಿದ್ದು ಅದನ್ನು ಪಾವತಿಸಲು ರಮೇಶ ಪಟಗಾರ ಅವರ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಂಕಾಳು ವೈದ್ಯ ಅವರು `ತಾನು ಮಂಗಳೂರಿನ ಎ ಜೆ ಆಸ್ಪತ್ರೆಯವರ ಜೊತೆ ಮಾತನಾಡುವೆ. ವೈಯಕ್ತಿಕವಾಗಿಯೂ ಸಹಾಯ ಮಾಡುವೆ. ಜೊತೆಗೆ ಸರ್ಕಾರದಿಂದ ಪರಿಹಾರ ಕೊಡಿಸುವೆ’ ಎಂಬ ಭರವಸೆ ನೀಡಿದರು. ಈ ವಿಷಯದ ಬಗ್ಗೆ ಆರೋಗ್ಯ ಸಚಿವರಿಗೂ ಪತ್ರ ಬರೆದಿರುವುದಾಗಿ ಆಗ್ನೇಲ್ ರೋಡ್ರಿಗಸ್ ಅವರು ತಿಳಿಸಿದರು. ರಮೇಶ್ ಅವರ ಮಗ ನಿತಿನ್, ಚಿಕ್ಕಪ್ಪ ಗಣಪತಿ ಪಟಗಾರ. ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ, ನಿವೃತ ಅಧಿಕಾರಿ ನಾಗೇಶ್ ಇತರರು ಇದ್ದರು.