ಅಂಕೋಲಾ ಅಗಸೂರಿನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕವನಾ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಇನ್ನೂ ನಿಗೂಢವಾಗಿಯೇ ಇದೆ.
ಅಗಸೂರು ಬಳಿಯ ಅಡ್ಲೂರು ಗ್ರಾಮದಲ್ಲಿ ಕವನಾ ಗೌಡ (೧೭) ವಾಸಿಸುತ್ತಿದ್ದರು. ಮಂಗಳವಾರ ಅವರು ಕಾಲೇಜಿಗೆ ಹೋಗಿ ಮನೆಗೆ ಮರಳಿದ್ದರು. ಸಂಜೆ ಸಹೋದರನ ಬಳಿ `ತಿಂಡಿ ತೆಗೆದುಕೊಂಡು ಬಾ’ ಎಂದಿದ್ದರು. ಸಹೋದರ ತಿಂಡಿ ತರಲು ಅಂಗಡಿಗೆ ಹೋದಾಗ ಕವನಾ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ.
ADVERTISEMENT
ಈ ವೇಳೆ ಕವನ ಅವರ ತಾಯಿ ಕೊಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಮನೆಯೊಳಗೆ ಬಂದಾಗ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ಮನೆಯ ಮೇಲ್ಛಾವಣಿಗೆ ಸೀರೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕವನ ಪತ್ತೆಯಾಗಿದ್ದಾರೆ. ನೆರೆ ಹೊರೆಯವರು ಆಗಮಿಸಿ ಕವನ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
Discussion about this post