ಕಾರವಾರದ ಸದಾಶಿವಗಡದಲ್ಲಿರುವ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿನ ಹಣ ಸೊಸೈಟಿ ಮ್ಯಾನೇಜರ್ ಖಾತೆ ಸೇರಿದ ಆರೋಪವ್ಯಕ್ತವಾಗಿದೆ. 50ಕೋಟಿಗೂ ಅಧಿಕ ರೂ ವಂಚನೆಯಾಗಿರುವ ಬಗ್ಗೆ ಠೇವಣಿದಾರರು ದೂರಿದ್ದಾರೆ.
ಈ ಹಿಂದೆ ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ 50 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿತ್ತು. ಅದಾದ ನಂತರ ಸದಾಶಿವಗಡದ ಆಶ್ರಯ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದ ಬಗ್ಗೆ ಆರೋಪ ಕೇಳಿ ಬಂದಿದ್ದು, ಸಿಐಡಿ ತನಿಖೆ ನಡೆಯುತ್ತಿದೆ. ಇದೀಗ ಇನ್ನೊಂದು ಹಣಕಾಸಿನ ಅವ್ಯವಹಾರ ಹೊರಬಿದ್ದಿದೆ.
ಸದಾಶಿವಗಡದ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸದಾಶಿವಗಡದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಾರವಾರ ಸೇರಿ ಸುತ್ತಲಿನ ಊರುಗಳಲ್ಲಿ ಒಟ್ಟು 12 ಶಾಖೆಗಳನ್ನು ಹೊಂದಿದೆ. ಗ್ರಾಹಕರು ಅಲ್ಲಿ 48 ಕೋಟಿ ರೂ ಠೇವಣಿ ಹಣವಿರಿಸಿದ್ದಾರೆ. ಅವಧಿ ಮೀರಿದರೂ ಆ ಹಣ ಮಾತ್ರ ಸಿಗುತ್ತಿಲ್ಲ. `ಸೊಸೈಟಿ ಅಧ್ಯಕ್ಷ ಹಾಗೂ ನಿರ್ದೇಶಕರು ತಮಗೆ ಮೋಸ ಮಾಡಿದ್ದಾರೆ’ ಎಂದು ಅಲ್ಲಿನವರು ದೂರಿದ್ದಾರೆ.
`ಸೊಸೈಟಿ ಹೆಚ್ಚಿನ ಬಡ್ಡಿ ಕೊಡುವ ಆಸೆ ತೋರಿಸಿದ ಸೊಸೈಟಿ ಠೇವಣಿ ಸಂಗ್ರಹಿಸಿತು. ನಂತರ ನಿಧಾನವಾಗಿ ಗ್ರಾಹಕರ ಠೇವಣಿ ಮರಳಿಸುವುದನ್ನು ನಿಲ್ಲಿಸಿತು’ ಎಂದು ಅಲ್ಲಿನವರು ದೂರಿದ್ದಾರೆ. `ಜೂನ್ ತಿಂಗಳಿನಲ್ಲಿ ಎಲ್ಲರ ಹಣ ಮರಳಿಸುವುದಾಗಿ ಅಧ್ಯಕ್ಷ ಲಿಂಗರಾಜ ಗುಟಕರ್ ಲಿಖಿತವಾಗಿ ಬರೆದುಕೊಟ್ಟಿದ್ದರು. ಆದರೆ, ಅದನ್ನು ನೀಡಿಲ್ಲ’ ಎಂದು ಜನ ಅಳಲು ತೋಡಿಕೊಂಡರು.
Discussion about this post