ದಾಂಡೇಲಿಯಲ್ಲಿ ಮತ್ತೆ ಸರಣಿ ಕಳ್ಳತನ ಮುಂದುವರೆದಿದೆ. ಈ ಬಾರಿ ಲಿಂಕ್ ರಸ್ತೆಯಲ್ಲಿರುವ ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.
ಬುಧವಾರ ರಾತ್ರಿ ಲಿಂಕ್ ರಸ್ತೆಯಲ್ಲಿರುವ ಔಷಧಿ ಅಂಗಡಿ ಹಾಗೂ ಮೊಬೈಲ್ ಅಂಗಡಿ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಔಷಧಿ ಅಂಗಡಿಯಲ್ಲಿದ್ದ 4 ಸಾವಿರ ರೂ ಹಣವನ್ನು ಕಳ್ಳರು ಎಗರಿಸಿದ್ದಾರೆ. ಮೊಬೈಲ್ ಅಂಗಡಿಯಲ್ಲಿಯೂ 1500ರೂ ದೋಚಿದ್ದಾರೆ.
ADVERTISEMENT
ಸತೀಶ್ ಬೀದಾದ್ ಒಡೆತನದ ಔಷಧಿ ಅಂಗಡಿ ಅದಾಗಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊಬೈಲ್ ಅಂಗಡಿಯಲ್ಲಿನ ಮೊಬೈಲ್ ಸಹ ಕಳ್ಳತನವಾಗಿರುವ ಬಗ್ಗೆ ಅಂಗಡಿಯವರು ಹೇಳಿದ್ದಾರೆ. ಅಂಗಡಿಯ ಮೇಲ್ಚಾವಣಿ ಶೀಟು ತೆರೆದು ಕಳ್ಳತನ ನಡೆಸಿರುವುದು ಗೊತ್ತಾಗಿದೆ.
ಕೆಲ ತಿಂಗಳ ಹಿಂದೆಯೂ ಇಲ್ಲಿ ಸರಣಿ ಕಳ್ಳತನ ನಡೆದಿತ್ತು. ಆಗಲು ಪೊಲೀಸರು ಅನೇಕರ ವಿಚಾರಣೆ ನಡೆಸಿದ್ದರು. ಆದರೆ, ಕಳ್ಳರು ಪತ್ತೆ ಆಗಿರಲಿಲ್ಲ. ಇದೀಗ ಮತ್ತೆ ಎರಡು ಅಂಗಡಿಯಲ್ಲಿ ಕಳ್ಳತನ ನಡೆದಿರುವುದು ಅಂಗಡಿಕಾರರ ನಿದ್ದೆಗೆಡಿಸಿದೆ.
ADVERTISEMENT
Discussion about this post