ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು ಗಿಡ ನೆಡುವ ಪುಣ್ಯಕಾರ್ಯದಲ್ಲಿ ಭಾಗಿಯಾಗುತ್ತಿದ್ದು, ಈ ಹಸಿರು ಅಭಿಯಾನದಲ್ಲಿ ಚಿಕ್ಕ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲೆಯಲ್ಲಿ ದಶಲಕ್ಷ ಗಿಡ ನೆಡುವ ಅಭಿಯಾನ ಆಯೋಜಿಸಿದೆ. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಕೈ ಜೋಡಿಸಿದ್ದಾರೆ. ಜೂನ್ 21ರಿಂದ ಈ ಅಭಿಯಾನದ ಅಂಗವಾಗಿ ಈಗಾಗಲೇ ಸಾವಿರಾರು ಗಿಡಗಳು ಭೂಮಿಗೆ ಬಿದ್ದಿವೆ.
ADVERTISEMENT
ಒಂದೇ ದಿನ 500ಕ್ಕೂ ಅಧಿಕ ಸ್ಥಳದಲ್ಲಿ 500ಕ್ಕೂ ಅಧಿಕ ಬಗೆಯ ಗಿಡ ನಾಟಿ ಮಾಡಿರುವುದು ಈ ಅಭಿಯಾನದ ಒಂದು ವಿಶೇಷ. ಗಾಳಿ-ಮಳೆಯನ್ನು ಲೆಕ್ಕಿಸದೇ ಅನೇಕರು ಈ ಅಭಿಯಾನದಲ್ಲಿ ಭಾಗವಹಿಸುತ್ತಿದ್ದು, ಪರಿಸರ ಸಂದೇಶ ಸಾರುತ್ತಿದ್ದಾರೆ. ಜುಲೈ 5ರವರೆಗೂ ಈ ಅಭಿಯಾನ ನಡೆಯಲಿದೆ.
ADVERTISEMENT
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ಅರಣ್ಯ ಅತಿಕ್ರಮಣದಾರರು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಪ್ರತಿ ಅರಣ್ಯವಾಸಿ ಕುಟುಂಬವು ಕನಿಷ್ಠ ಹತ್ತು ಗಿಡ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಲಾಗಿದೆ.
Discussion about this post