ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು ಬದಲಾಗಿದ್ದಾರೆ. ಜೂನ್ 26ರಂದು ರಾಜ್ಯದ ಅನೇಕ ತಾಲೂಕಿನ ತಹಶೀಲ್ದಾರರನ್ನು ವಿವಿಧ ತಹಶೀಲ್ದಾರರನ್ನು ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅದರ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ನೂತನ ತಹಶೀಲ್ದಾರ್ ಆಗಿ ದಾವಣಗೆರೆಯ ಹೊನ್ನಾಳ್ಳಿಯಲ್ಲಿದ್ದ ಪುಟ್ಟರಾಜ ಗೌಡ ಅವರು ಆಗಮಿಸಿದ್ದಾರೆ. ಅಂಕೋಲಾಗೆ ಬೈಲಹೊಂಗಲದಲ್ಲಿ ತಹಶೀಲ್ದಾರರಾಗಿದ್ದ ಡಾ ಚಿಕ್ಕಪ್ಪ ನಾಯಕ ಆಗಮಿಸಿದ್ದಾರೆ.
ADVERTISEMENT
ಭಟ್ಕಳದಲ್ಲಿ ಉಪತಹಶೀಲ್ದಾರ್ ಆಗಿದ್ದ ನಾಗೇಂದ್ರ ಕೋಳಶೆಟ್ಟಿ ಅವರಿಗೆ ಪದೋನ್ನತಿ ನೀಡಿ ಅಲ್ಲಿಯೇ ತಹಶೀಲ್ದಾರ್ ಹುದ್ದೆ ನೀಡಲಾಗಿದೆ. ಯಲ್ಲಾಪುರ ತಹಶೀಲ್ದಾರ್ ಆಗಿದ್ದ ಯಲ್ಲಪ್ಪ ಗೇಣೆಣ್ಣನವರ್ ಅವರಿಗೆ ಅವರ ಸ್ವಂತ ಜಿಲ್ಲೆಯಾದ ಹಾವೇರಿಗೆ ಕಳುಹಿಸಲಾಗಿದೆ. ಯಲ್ಲಾಪುರಕ್ಕೆ ನೂತನ ತಹಶೀಲ್ದಾರ್ ನೇಮಕ ನಡೆದಿಲ್ಲ.
ADVERTISEMENT
Discussion about this post