ಭಟ್ಕಳದ ಮುಂಡಳ್ಳಿಯ ಚಡ್ಡುಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆಯ ಹತ್ಯೆ ನಡೆದಿದೆ. ಮಾಂಸದ ಆಸೆಗಾಗಿ ದುಷ್ಕರ್ಮಿಗಳು ಹಾಲು ಹಿಂಡುವ ಎಮ್ಮೆಯ ವಧೆ ಮಾಡಿದ್ದಾರೆ.
ಚಡ್ಡುಮನೆಯ ರಚನ್ ನಾಯ್ಕ ಅವರು ಪ್ರೀತಿಯಿಂದ ಎಮ್ಮೆ ಸಾಕಿದ್ದರು. ಹೈನುಗಾರಿಕೆ ನಡೆಸಿ ಅವರು ಉಪಜೀವನ ಕಂಡುಕೊoಡಿದ್ದರು. ಭಾನುವಾರ ರಾತ್ರಿ ದುಷ್ಕರ್ಮಿಗಳು ಅವರ ಎಮ್ಮೆ ಮೇಲೆ ಕಣ್ಣು ಹಾಕಿದ್ದು, ಎಮ್ಮೆಯನ್ನು ಕದ್ದೊಯ್ದು ಅನತಿ ದೂರದಲ್ಲಿ ವಧೆ ಮಾಡಿದರು.
ಬೆಳಗ್ಗೆ ಎಮ್ಮೆ ಇಲ್ಲದಿರುವುದನ್ನು ನೋಡಿದ ರಚನ್ ನಾಯ್ಕ ಅವರು ಸುತ್ತಲು ಹುಡುಕಾಟ ನಡೆಸಿದರು. ಆಗ ಮಾಂಸಕ್ಕಾಗಿ ಎಮ್ಮೆಯನ್ನು ಕೊಂದಿರುವ ದೃಶ್ಯ ಕಾಣಿಸಿತು. ಪ್ರೀತಿಯಿಂದ ಸಾಕಿದ್ದ ಎಮ್ಮೆಯ ರುಂಡ-ಮುoಡ ಬೇರೆ ಬೇರೆಯಾಗಿರುವುದನ್ನು ನೋಡಿ ರಚನ್ ನಾಯ್ಕ ಅವರು ಆಘಾತಕ್ಕೆ ಒಳಗಾದರು.
ವಿಷಯ ತಿಳಿದ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ರಾಮಕೃಷ್ಣ ನಾಯ್ಕ ಅವರು ಸ್ಥಳಕ್ಕೆ ಬಂದರು. ಹಿಂದು ಜಾಗರಣಾ ವೇದಿಕೆ ಸಂಚಾಲಕ ಜಯಂತ ನಾಯ್ಕ, ನಾಗೇಶ್ ನಾಯ್ಕ, ಕುಮಾರ್ ನಾಯ್ಕ ಪೊಲೀಸರ ಬಳಿ ತೆರಳಿದರು. ಬಿಜೆಪಿ ಪ್ರಮುಖರಾದ ಶ್ರೀಕಾಂತ ನಾಯ್ಕ, ರಾಘವೇಂದ್ರ ಮುಠ್ಠಳ್ಳಿ ಸಹ ರಜನ್ ನಾಯ್ಕ ಅವರ ಜೊತೆಯಾದರು.
ಡಿವೈಎಸ್‌ಪಿ ಮುಂದಾಳತ್ವದಲ್ಲಿ ಸಭೆ ನಡೆದಿದ್ದು, ಎಮ್ಮೆ ಹಂತಕರ ಬಂಧನಕ್ಕೆ ಎಲ್ಲರೂ ಒತ್ತಾಯಿಸಿದರು. ಪೊಲೀಸರು ಕಠಿಣ ಕ್ರಮದ ಭರವಸೆ ನೀಡಿದರು.
Discussion about this post