ಯಲ್ಲಾಪುರ ಜಾತ್ರೆಗೆ ಬರುವ ಪ್ರತಿಯೊಬ್ಬರಿಗೂ ದೇವಿ ಗದ್ದುಗೆಯ ಬಲಭಾಗ ಲಡ್ಡು ಪ್ರಸಾದ ವಿತರಿಸಲಾಗುತ್ತಿದೆ. ಜೊತೆಗೆ ಭಕ್ತರ ದಾಹ ನೀಗಿಸಲು ಅಲ್ಲಿಯೇ ಪಾನಕವನ್ನು ಕೊಡಲಾಗುತ್ತಿದೆ.
ಲಡ್ಡು ಪ್ರಸಾದ ಸ್ವೀಕಾರ ಹಾಗೂ ಪಾನಕ ಸೇವನೆಗೆ ಯಾವುದೇ ಶುಲ್ಕವಿಲ್ಲ. ಬರುವ ಭಕ್ತರಿಗೆ ಸಂಪೂರ್ಣ ಉಚಿತವಾಗಿ ಈ ಸೇವೆ ನೀಡಲಾಗುತ್ತಿದೆ. ಫೆ 12ರಂದು ಯಲ್ಲಾಪುರ ಲಾರಿ ಚಾಲಕ ಹಾಗೂ ಮಾಲಕ ಸಂಘದವರು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಿದ್ದಾರೆ. ದೇವಿ ದರ್ಶನ ಹಾಗೂ ಪೂಜಾ ಸೇವೆಯ ಮೊದಲ ದಿನವೇ 6 ಸಾವಿರಕ್ಕೂ ಅಧಿಕ ಭಕ್ತರು ಲಡ್ಡು ಪ್ರಸಾದ ಸ್ವೀಕರಿಸಿದ್ದಾರೆ.
ಅಲ್ಲಿಯೇ ಸತ್ಯ ಸಾಯಿ ಸೇವಾ ಸಮಿತಿಯವರು ಪಾನಕ ನೀಡುತ್ತಿದ್ದಾರೆ. ದಣಿದು ಬರುವ ಭಕ್ತರ ದಾಹ ತೀರಿಸುವುದಕ್ಕಾಗಿ ಪಟ್ಟಣ ಪಂಚಾಯತ ಮಾಜಿ ಸದಸ್ಯ ರಾಧಾಕೃಷ್ಣ ಅವರ ತಂಡದವರು ಪಾನಕ ವಿತರಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಲಾರಿ ಮಾಲಕ ಸಂಘದ ಅಧ್ಯಕ್ಷ ಸುಜಯ ಮರಾಠಿ, ಪದಾಧಿಕಾರಿಗಳಾದ ನವೀನ್ ನಾಯ್ಕ, ಮಹೇಶ್ ನಾಯ್ಕ, ರೂಪೇಶ್ ನಾಯ್ಕ, ಮುರಳಿ ರಾವಲ್, ಸುರೇಶ ಮರಾಠಿ, ವೆಂಕಟ್ರಮಣ ಹೆಗಡೆ ಹಾಗೂ ನಾಗೇಂದ್ರ ಭಟ್ ಸ್ಥಳದಲ್ಲಿದ್ದು ಸೇವೆ ಮಾಡುತ್ತಿದ್ದಾರೆ.