ಅಂಕೋಲಾ ಶೇಡಗೇರಿ ಗ್ರಾಮದ ಕೋಟೆವಾಡದಲ್ಲಿ ಅನಧಿಕೃತ ಶೆಡ್ ನಿರ್ಮಾಣವಾಗಿದ್ದು, ಇದನ್ನು ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪದೇ ಪದೇ ಪತ್ರ ಸ್ವೀಕಾರವಾದರೂ ಸರ್ವೇಯರ್ ರೋಷನ್ ಕೇಣಿ ಭೂ ಅಳತೆಗೂ ಆಸಕ್ತಿವಹಿಸಿಲ್ಲ.
ಶೇಡಗೇರಿ ಗ್ರಾಮದ ಮಾರುತಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಅನಧಿಕೃತ ಶೆಡ್ ತಲೆಯೆತ್ತಿದೆ. ಈ ಶೆಡ್ ನಿರ್ಮಾಣದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಕೋಟೆವಾಡದ ಸಂಜೀವ ನಾಯ್ಕ ಅವರು ಹೋರಾಟ ನಡೆಸುತ್ತಿದ್ದಾರೆ. ತಹಶೀಲ್ದಾರ್ ಕಚೇರಿಯಿಂದ 400ಮೀ ದೂರದಲ್ಲಿ ಅನಧಿಕೃತ ಕಟ್ಟಡವಿದ್ದರೂ ಅದನ್ನು ಸರ್ಕಾರ ಗಮನಿಸಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯತದಿAದ ಹಿಡಿದು ಜಿಲ್ಲಾಧಿಕಾರಿಗಳವರೆಗೆ ಎಲ್ಲರಿಗೂ ಅವರು ಪತ್ರ ಬರೆದಿದ್ದಾರೆ. ಸರ್ವೇ ಕಾರ್ಯ ನಡೆಸಿ ಅನಧಿಕೃತ ಶೆಡ್ ತೆರವು ಮಾಡುವಂತೆ ಅವರು ಒತ್ತಾಯಿಸುತ್ತೇ ಬಂದಿದ್ದಾರೆ.
ಆದರೆ, ಅತಿಕ್ರಮಣ ಕಟ್ಟಡವಿರುವ ಭೂಮಿ ಸರ್ವೇ ಕಾರ್ಯ ಈವರೆಗೂ ನಡೆದಿಲ್ಲ. ಸರ್ವೇ ಅರ್ಜಿ ಸ್ವೀಕರಿಸಿದ ಭೂ ಮಾಪನಾ ಇಲಾಖೆ ಸರ್ವೇಗೆ ಅಗತ್ಯವಿರುವ ಸುಣ್ಣದ ಜೊತೆ ಇಬ್ಬರು ಕೂಲಿ ಆಳುಗಳನ್ನು ಜೊತೆಗೆ ತರುವಂತೆ ಅರ್ಜಿದಾರರಿಗೆ ಅಧಿಕೃತ ಪತ್ರದ ಮೂಲಕ ಸೂಚಿಸಿದ್ದು, ಸುಣ್ಣದ ಜೊತೆ ಕೂಲಿ ಆಳುಗಳನ್ನು ಕರೆದುಕೊಂಡು ಹೋಗಿದ್ದ ಸಂಜೀವ ನಾಯ್ಕ ಸೋತು ಹೋಗಿದ್ದಾರೆ. ಸರ್ಕಾರಿ ಶುಲ್ಕ ಪಾವತಿ ಜೊತೆ ಕೂಲಿ ಆಳುಗಳ ವೆಚ್ಚ ಪಾವತಿ ಮಾಡಿದರೂ ಆ ದಿನ ಸರ್ವೇಯರ್ ರೋಷನ್ ಕೇಣಿ ಭೂ ಮಾಪನ ಕೆಲಸ ಮಾಡಿಲ್ಲ!
ಅನಧಿಕೃತ ಶೆಡ್ ತೆರವು ಮಾಡಿದರೆ ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಜಾಗ ಸಿಗಲಿದೆ. ಹೀಗಾಗಿ ಸಂಜೀವ ನಾಯ್ಕ ಅವರು ಈ ಹೋರಾಟ ಕೈಗೆತ್ತಿಕೊಂಡಿದ್ದು, ಇಬ್ಬರು ಸರ್ವೇ ಕಾರ್ಯ ನಡೆಸಿ ಪ್ರಕರಣದ ಬಗ್ಗೆ ವರದಿ ನೀಡಬೇಕಿದ್ದ ಸರ್ವೇಯರ್ ರೋಷನ್ ಕೇಣಿ ಆರಂಬಿಕ ಹಂತದಲ್ಲಿಯೇ ಎಡವಿ ಬಿದ್ದಿದ್ದಾರೆ. ಭೂ ಮಾಪನ ಕಾರ್ಯ ನಡೆಸಬೇಕಿದ್ದ ರೋಷನ್ ಕೇಣಿ ಅವರು ಸ್ಥಳಕ್ಕೆ ಬಂದರೂ ಸರ್ವೇ ಮಾಡದೇ ಹೋಗಿರುವ ಬಗ್ಗೆ ಅನುಮಾನವ್ಯಕ್ತಪಡಿಸಿ ಸಂಜೀವ ನಾಯ್ಕ ಅವರು ಜಿಲ್ಲಾಧಿಕಾರಿಗಳಿಗೆ ಮತ್ತೊಂದು ದೂರು ನೀಡಿದ್ದಾರೆ. ಸರ್ವೇ ಅಧಿಕಾರಿಗಳ ಕÀರ್ತವ್ಯ ಲೋಪದ ಬಗ್ಗೆಯೂ ಅವರು ಆಕ್ಷೇಪಿಸಿದ್ದಾರೆ.
Discussion about this post