ನಿತ್ಯ ಸಾವಿರಾರು ಜನ ಭೇಟಿ ನೀಡುವ ಗೋಕರ್ಣ ಗಬ್ಬೆದ್ದಿರುವ ಬಗ್ಗೆ ಕರವೇ ಜನಧ್ವನಿಯ ಉಮಾಕಾಂತ ಹೊಸಕಟ್ಟಾ ಅವರು ಅಸಮಧಾನವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ ಮರುದಿನವೇ ಕೋಟಿತೀರ್ಥ ಶುದ್ಧಗೊಂಡಿದೆ.
mobiletime.in ಮೂಲಕ ಎಚ್ಚರಿಕೆ ನೀಡಿದನ್ನು ಗಮನಿಸಿದ ಅಲ್ಲಿನ ಗ್ರಾ ಪಂ ಆಡಳಿತ ತರಾತುರಿಯಲ್ಲಿ ಗೋಕರ್ಣದ ಕೋಟಿತೀರ್ಥದ ಕೊಳಚೆ ತೆಗೆದಿದೆ. ಗ್ರಾಮ ಪಂಚಾಯತದ ವೈಪಲ್ಯ ಹಾಗೂ ಗೋಕರ್ಣ ಅಶುಚಿತ್ವದ ಬಗ್ಗೆ ಉಮಾಕಾಂತ ಹೊಸಕಟ್ಟಾ ಅವರು ಕಿಡಿಕಾರಿದ್ದರು. ಪವಿತ್ರ ಸ್ಥಳವನ್ನು ಅಶುಚಿತ್ವ ಮಾಡುತ್ತಿರುವ ಬಗ್ಗೆ ಅವರು ಅಸಮಧಾನವ್ಯಕ್ತಪಡಿಸಿದ್ದು, ಸ್ಥಳೀಯ ಆಡಳಿತದ ಕೆಲಸದ ಬಗ್ಗೆ ಪ್ರಶ್ನಿಸಿದ್ದರು.
ಪ್ರವಾಸಿಗರಿಗೆ ಅರಿವು ಮೂಡಿಸುವುದರ ಜೊತೆ ನಿರಂತರ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು. ಗ್ರಾ ಪಂ ಆಡಳಿತ ಸುಧಾರಣೆ ಆಗದಿದ್ದರೆ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲೆ ಗ್ರಾ ಪಂ ಆಡಳಿತ ಕೋಟಿತೀರ್ಥದ ಮಾಲಿನ್ಯ ತೆಗೆದಿದೆ. ಶ್ರೀಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದಕ್ಕಾಗಿ ಉಮಾಕಾಂತ ಹೊಸಕಟ್ಟಾ ಅವರು ಸಂತಸವ್ಯಕ್ತಪಡಿಸಿದ್ದಾರೆ.
Discussion about this post