ಮುಂಡಗೋಡಿನ ಬಾಚಣಗಿ ಬಳಿ ತೋಟಗಾರಿಕಾ ಇಲಾಖೆ ಬೆಳೆಸಿದ ಅಡಿಕೆ ಗಿಡಗಳ ಮೇಲೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿದ್ದಾರೆ. ಅಲ್ಲಿದ್ದ ನೂರಾರು ಅಡಿಕೆ ಗಿಡಗಳು ಸಾವನಪ್ಪಿದೆ.
ಹುಬ್ಬಳ್ಳಿ ರಾಜ್ಯ ಹೆದ್ದಾರಿ ಪಕ್ಕ ತೋಟಗಾರಿಕಾ ಇಲಾಖೆಗೆ ಸೇರಿದ 50 ಎಕರೆ ಭೂಮಿಯಿದೆ. ಇಲ್ಲಿ ಇಲಾಖೆಯವರು ಎರಡು ವರ್ಷದ ಹಿಂದೆ ಅಡಿಕೆ ಗಿಡ ನೆಟ್ಟಿದ್ದು ಗಿಡಗಳೆಲ್ಲವೂ ಚನ್ನಾಗಿ ಬೆಳೆದಿದ್ದವು. ಇದನ್ನು ಸಹಿಸದ ಕಿಡಿಗೇಡಿಗಳು ಅದಕ್ಕೆ ಕಳೆನಾಶಕ ಸಿಂಪಡಿಸಿ ಪರಾರಿಯಾಗಿದ್ದಾರೆ.
ಈ ಮೊದಲು ಇಲ್ಲಿ ಸಾವಿರಾರು ತೆಂಗಿನ ಗಿಡಗಳಿದ್ದವು. ನಿರ್ವಹಣೆ ಕೊರತೆಯಿಂದ ಅವೆಲ್ಲವೂ ಹಾಳಾಗಿದ್ದು, ಸದ್ಯ ಅಡಿಕೆ ಗಿಡಗಳು ಸಾವನಪ್ಪಿವೆ. ಪ್ರಸ್ತುತ ಒಟ್ಟು 5 ಸಾವಿರದಷ್ಟು ಅಡಿಕೆ ಗಿಡಗಳನ್ನು ತೋಟಗಾರಿಕಾ ಇಲಾಖೆಯವರು ನಿರ್ವಹಣೆ ಮಾಡುತ್ತಿದ್ದಾರೆ. ಒಂದು ವಾರದ ಹಿಂದೆ ಕಳೆನಾಶಕ ಸಿಂಪಡಿಸಿರುವ ಸಾಧ್ಯತೆಯಿದ್ದು, ಒಂದು ಭಾಗದ ಗಿಡಗಳೆಲ್ಲವೂ ಸಾವನಪ್ಪಿದೆ. ಇನ್ನೊಂದು ಪ್ರದೇಶದ ಗಿಡಗಳು ಬಾಡಲು ಶುರುವಾಗಿದೆ.
ಸಾವನಪ್ಪಿದ ಗಿಡಗಳನ್ನು ತೆರವು ಮಾಡಿ ಬೇರೆ ಗಿಡಗಳನ್ನು ನಾಟಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
Discussion about this post