ಮರಿ ಪುಡಾರಿಗಳಿಗೆ ಪಿಸ್ತೂಲಿನ ಸದ್ದಿನಿಂದ ಬುದ್ದಿ ಕಲಿಸಿದ್ದ ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ವರ್ಗಾವಣೆಯಾಗಿದೆ. ಎಂ ನಾರಾಯಣ ಅವರು ಬೆಂಗಳೂರು ಸಿಟಿ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಹೊಂದಿದ್ದಾರೆ.
ಎo ನಾರಾಯಣ ಅವರು ಉತ್ತರ ಕನ್ನಡ ಜಿಲ್ಲೆಯ ಮಟ್ಕಾ ದಂಧೆ ನಿಯಂತ್ರಣಕ್ಕೆ ತಂದಿದ್ದರು. ಸಣ್ಣಪುಟ್ಟ ರೌಡಿಗಳನ್ನು ನಿಯಂತ್ರಣದಲ್ಲಿಟ್ಟುಕೊoಡು ಅಪರಾಧ ಚಟುವಟಿಕೆ ತಡೆದಿದ್ದರು. 7ಕ್ಕೂ ಅಧಿಕ ಕಡೆ ಪೊಲೀಸ್ ಪಿಸ್ತೂಲು ಬಳಕೆ ಮಾಡಿದ್ದು, ವಿವಿಧ ಪ್ರಕರಣಗಳ ಆರೋಪಿಗಳಿಗೆ ಪಿಸ್ತೂಲಿನ ಮೂಲಕವೇ ಉತ್ತರ ಕೊಟ್ಟಿದ್ದರು.
ಬಡ್ಡಿಸಾಲ ದಂದೇಕೋರರ ವಿರುದ್ಧ ಸಮರ ಸಾರಿದ್ದ ಎಂ ನಾರಾಯಣ್ ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ದಂಧೆ ನಿಯಂತ್ರಿಸಿದ್ದರು. ಏಕಾಏಕಿ ಎಲ್ಲೆಂದರಲ್ಲಿ ದಾಳಿ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿಯೇ ಎಂ ನಾರಾಯಣ ಅವರು ಎಷ್ಟು ಜನಪ್ರಿಯತೆಪಡೆದಿದ್ದರೋ, ಅಷ್ಟೇ ಪ್ರಮಾಣದಲ್ಲಿ ವಿರೋಧಿಗಳನ್ನು ಸಹ ಹೊಂದಿದ್ದರು.
ತಳಹಂತದ ಪೊಲೀಸ್ ಅಧಿಕಾರಿಗಳ ವಿಶ್ವಾಸಗಳಿಸಿದ್ದರು. ಈ ಹಿಂದೆ ಭಟ್ಕಳದಲ್ಲಿ ಡಿವೈಎಸ್‌ಪಿ ಆಗಿ ಅನುಭವಪಡೆದಿದ್ದರಿಂದ ಅಲ್ಲಿನ ಅಕ್ರಮಗಳನ್ನು ನಿಯಂತ್ರಿಸಿದ್ದರು. ಒಲ್ಲದ ಮನಸ್ಸಿನಿಂದಲೇ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ಬಂದಿದ್ದ ಅವರು ಇದೀಗ ಒಲ್ಲದ ಮನಸ್ಸಿನಿಂದಲೇ ವರ್ಗಾವಣೆ ಆಗಿದ್ದಾರೆ
Discussion about this post