ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ತಪ್ಪಿಸಲು ಹೋಗಿ ಭಟ್ಕಳದ ಕುಮಾರ ನಾಯ್ಕ ಅವರು ಚಾಕುವಿನಿಂದ ತಮ್ಮ ಕುಂಡೆ ಕೆತ್ತಿಸಿಕೊಂಡಿದ್ದಾರೆ. ಚಾಕು ಚುಚ್ಚಿದ ಗುರುರಾಜ ನಾಯ್ಕ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ.
ಭಟ್ಕಳ ಶಿರಾಲಿಯ ಗುಡಿಹಿತ್ತಲುವಿನ ಕುಮಾರ ನಾಯ್ಕ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಜುಲೈ 14ರ ರಾತ್ರಿ ಗುಡಿಹತ್ತಿಲು ಕ್ರಾಸಿನ ಬಳಿ ಅವರು ಮಗ ಚಂದ್ರಶೇಖರ ನಾಯ್ಕ ಹಾಗೂ ಇನ್ನಿತರ ಸ್ನೇಹಿತರ ಜೊತೆ ಮಾತನಾಡುತ್ತ ನಿಂತಿದ್ದರು. ಆಗ, ಅಲ್ಲಿಗೆ ಬಂದ ಶಿರಾಲಿ ಕರಿಕೂಸುಮನೆಯ ಗುರುರಾಜ ನಾಯ್ಕ ಅವರು ಚಂದ್ರಶೇಖರ ನಾಯ್ಕ ಅವರ ಬಳಿ ಜಗಳ ಶುರು ಮಾಡಿದರು.
ಮಗನಿಗೆ ಬೈದಿದನ್ನು ಸಹಿಸದ ಕುಮಾರ ನಾಯ್ಕ ಅವರು ಮದ್ಯ ಪ್ರವೇಶಿಸಿದರು. ಈ ಜಗಳ ತಪ್ಪಿಸುವ ಪ್ರಯತ್ನ ಮಾಡಿದರು. ಆಗ, ಗುರುರಾಜ ನಾಯ್ಕ ಅವರು ಚಂದ್ರಶೇಖರ ನಾಯ್ಕ ಅವರಿಗೆ ಚಾಕು ಚುಚ್ಚಲು ಪ್ರಯತ್ನಿಸಿದ್ದು, ಇದನ್ನು ಸಹಿಸದ ಕುಮಾರ ನಾಯ್ಕ ಅಡ್ಡ ಬಂದರು. ಪರಿಣಾಮ ಆ ಚಾಕು ಕುಮಾರ ನಾಯ್ಕ ಅವರ ಕುಂಡೆಗೆ ತಾಗಿತು. ಇದರಿಂದ ಬಲಭಾಗ ಕೆತ್ತಿ ಹೋಗಿದ್ದು ಕುಮಾರ ನಾಯ್ಕ ಅವರು ನೋವು ಅನುಭವಿಸುತ್ತಿದ್ದಾರೆ.
ತಮಗಾದ ಅನ್ಯಾಯದ ವಿರುದ್ಧ ಕುಮಾರ ನಾಯ್ಕ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Discussion about this post