ಕುಮಟಾದ ಕೋನಳ್ಳಿಯಲ್ಲಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವೃತಾಚರಣೆ ನಡೆಯುತ್ತಿದೆ. ಅನೇಕ ಗಣ್ಯರು ಚಾತುರ್ಮಾಸದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದಪಡೆಯುತ್ತಿದ್ದಾರೆ.
ಭಾನುವಾರ ಇಲ್ಲಿನ ವನದುರ್ಗಾ ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಭೇಟಿ ನೀಡಿದ್ದು, ಗುರುಗಳ ದರ್ಶನ ಮಾಡಿದರು. ಈ ವೇಳೆ ಅನಂತಮೂರ್ತಿ ಹೆಗಡೆ ಕುಟುಂಬದವರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಕುಟುಂಬಸಹಿತವಾಗಿ ಅವರು ಮಂತ್ರಾಕ್ಷತೆ ಸ್ವೀಕರಿಸಿದರು. ಉದ್ಯೋಗ-ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿ ಎಂದು ಶ್ರೀಗಳು ಹಾರೈಸಿದರು.
ನವೆಂಬರ್ ಮಾಸದಲ್ಲಿ ಮಠದಿಂದ ಹರಿದ್ವಾರದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸಿ ಸೇವೆ ಸಲ್ಲಿಸುವಂತೆ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆದೇಶಿಸಿದರು. ಇದಕ್ಕೆ ಅನಂತಮೂರ್ತಿ ಹೆಗಡೆ ಕುಟುಂಬದವರು ಸಮ್ಮತಿ ಸೂಚಿಸಿದರು. ಪ್ರಮುಖರಾದ ಶೋಭಾ ನಾಯ್ಕ, ರಮೇಶ ನಾಯ್ಕ ಕುಪ್ಪಳ್ಳಿ, ಸಂತೋಷ ನಾಯ್ಕ, ರಾಘವೇಂದ್ರ ನಾಯ್ಕ, ಉಷಾ ನಾಯ್ಕ, ದೀಪಾ ನಾಯ್ಕ, ಪ್ರಭಾವತಿ ಗೌಡ, ಶಿಲ್ಪಾ ಭಾಸ್ಕರ್, ಶಿವಾಜಿ, ವಿನಯ ಹೆಗಡೆ, ಗಣಪತಿ ನಾಯ್ಕ, ಸಿದ್ದಾಪುರದ ಕೃಷ್ಣಮೂರ್ತಿ ನಾಯ್ಕ ಐಸೂರು, ಆದರ್ಶ ಪೈ, ಗಿರೀಶ ಇತರರಿದ್ದರು.
Discussion about this post