ಯಲ್ಲಾಪುರದ ಕಿರವತ್ತಿ ಗ್ರಾಮ ಪಂಚಾಯತದಲ್ಲಿ ಅವ್ಯವಹಾರ ನಡೆದ ಬಗ್ಗೆ ಅಲ್ಲಿನ ಸದಸ್ಯರೇ ದೂರಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಹೇಳಿಕೆ ನೀಡಿದ್ದಾರೆ.
`ಗ್ರಾಮ ಪಂಚಾಯತದ ನಿಧಿ-2, 15ನೇ ಹಣಕಾಸು ಹಾಗೂ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿದೆ. ನಿಧಿ-2 ಹಣವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡು ಭ್ರಷ್ಟಾಚಾರ ನಡೆಸಲಾಗಿದೆ. ಪರಿಶಿಷ್ಟ ವರ್ಗ ಹಾಗೂ ಸಮುದಾಯದವರಿಗೆ ಬಳಕೆಯಾದ ಹಣ ದುರ್ಬಳಕೆಯಾಗಿದೆ’ ಎಂದವರು ದೂರಿದ್ದಾರೆ.
`ಕಿರವತ್ತಿ ಗ್ರಾಮ ಪಂಚಾಯತದಲ್ಲಿ ನಡೆದ ಎಲ್ಲಾ ಅಕ್ರಮಗಳ ತನಿಖೆ ನಡೆಯಬೇಕು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು. ಇಲ್ಲವಾದರೆ ಉಗ್ರ ಹೋರಾಟ ನಿಶ್ಚಿತ’ ಎಂದು ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಎಚ್ಚರಿಕೆ ನೀಡಿದ್ದಾರೆ.
Discussion about this post