ಕೂರ್ಮಗಡ ರೆಸಾರ್ಟಿನಲ್ಲಿ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ ಪ್ರಸಾದ ಅಂಬ್ಲೆಕರ್ ಸಿದ್ದರ ಬಳಿಯ ಕಾಳಿ ಹಿನ್ನೀರಿನಲ್ಲಿ ಮುಳುಗಿದ್ದು, ಎರಡು ದಿನದ ನಂತರ ಕಿನ್ನರದಲ್ಲಿ ಕಾಣಿಸಿಕೊಂಡಿದ್ದಾರೆ. ನದಿ ನೀರಿನಲ್ಲಿ ತೇಲುತ್ತಿದ್ದ ಪ್ರಸಾದ ಅಂಬ್ಲೆಕರ್ ಅವರ ಶವವನ್ನು ಅಲ್ಲಿನ ಜನ ದೋಣಿ ಮೂಲಕ ದಡಕ್ಕೆ ತಂದಿರಿಸಿದ್ದಾರೆ.
ಕಾರವಾರದ ಕಡವಾಡ ಮಾಡಿಭಾಗದ ಪ್ರಸಾದ ಅಂಬ್ಲೇಕರ್ ಅವರು ಕೂರ್ಮಗಡ ರೆಸಾರ್ಟಿನಲ್ಲಿ ಕೆಲಸಕ್ಕಿದ್ದರು. ಹೀಗಿರುವಾಗ ಜುಲೈ 20ರ ಮಧ್ಯಾಹ್ನ ಸ್ನೇಹಿತರಾದ ಅಖೀಲ ರೇವಣಕರ್, ಪ್ರಸಾದ ಮಾಂಜ್ರೇಕರ್, ಮಹೇಶ ಮಹಾಲೆ, ಸ್ವಪ್ನಾ, ಮನಾಲಿ, ಸಂಜೀವಿನಿ ಜೊತೆ ಅವರು ಪಾರ್ಟಿ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಸಿದ್ದರದ ಖಾರ್ಗೆಜೂಗ ಸೇತುವೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಎಲ್ಲರೂ ಸೇರಿ ಕಾರಿನ ಮೇಲೆ ಪಾರ್ಟಿ ಮಾಡಿದರು.
ಆ ದಿನ ಸಂಜೆ ಸಂಜೆ 6.30ಕ್ಕೆ ಪಾರ್ಟಿ ಮುಗಿದ ನಂತರ ಅವರು ಈಜಲು ಕಾಳಿ ನದಿಯ ಹಿನ್ನೀರಿಗೆ ಹಾರಿದರು. ದ್ವೀಪದ ರೆಸಾರ್ಟಿನಲ್ಲಿ ಸೆಕ್ಯುರಿಟಿ ಗಾರ್ಡ ಆಗಿ ಸಂಚರಿಸುತ್ತಿದ್ದ ಪ್ರಸಾದ ಅಂಬ್ಲೇಕರ್ ಅವರು ಸದಾ ಸಮುದ್ರದ ನೀರು ನೋಡುತ್ತಿದ್ದರು. ಹೀಗಾಗಿ ಅವರಿಗೆ ನೀರಿನ ಬಗ್ಗೆ ಭಯವಿರಲಿಲ್ಲ. ಆದರೆ, ನದಿ ನೀರಿನ ಸೆಳೆತದ ಬಗ್ಗೆಯೂ ಅವರಿಗೆ ಅರಿವಿರಲಿಲ್ಲ. ನೀರಿಗೆ ಬಿದ್ದ ಅವರು ಕೊಚ್ಚಿ ಹೋಗಿದ್ದು, ಎಷ್ಟು ಹುಡುಕಿದರೂ ಯಾರಿಗೂ ಕಾಣಲಿಲ್ಲ.
ಜುಲೈ 22ರಂದು ಕಿನ್ನರದ ಬೋರಿಬಂದರ್ ಹತ್ತಿರ ಶವವೊಂದು ಕಾಣಿಸಿತು. ಜನ ದೋಣಿ ಬಳಸಿ ಆ ಶವವನ್ನು ದಡಕ್ಕೆ ತಂದರು. ಇಲೆಕ್ಟಿಶಿಯನ್ ಪಂಕoಜ್ ಆಂಬ್ಲೆಕರ್ ಆಗಮಿಸಿ ಆ ಶವ ತನ್ನ ಸಹೋದರನದು ಎಂದು ಗುರುತಿಸಿದರು. ಪ್ರಸಾದ ಅಂಬ್ಲೆಕರ್ ಸಾವಿನ ಬಗ್ಗೆ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
Discussion about this post