ದೇಶದಲ್ಲಿ ಇದೇ ಮೊದಲ ಬಾರಿಗೆ ಕೊಂಕಣ ರೈಲ್ವೆ `ಕಾರ್ ರೋರೋ’ ಯೋಜನೆ ಶುರು ಮಾಡುತ್ತಿದೆ. ಎಲ್ಲವೂ ಅಂದುಕೊoಡoತೆ ನಡೆದರೆ, ಮುಂಬೈ-ಗೋವಾ ರೈಲು ಮಾರ್ಗದಲ್ಲಿ ಕಾರುಗಳು ಸಹ ಸಂಚರಿಸಲಿವೆ!
1999ರಿ0ದ ಕೊಂಕಣ ರೈಲು ನಿಗಮ ಗೂಡ್ಸ್ ಲಾರಿಗಳನ್ನು ರೈಲಿನ ಮೇಲೆ ಏರಿಸಿಕೊಂಡು ಹೋಗುತ್ತಿದೆ. ಆದರೆ, ಕಾರುಗಳನ್ನು ರೈಲಿನ ಮೇಲೆ ಹತ್ತಿಸಿಕೊಂಡ ನಿದರ್ಶನವಿಲ್ಲ. ಇದಿಗ ಕಾರ್ ಸೇವೆಯನ್ನು ನೀಡುವ ಸಿದ್ಧತೆ ನಡೆದಿದೆ.
ಆ 23ರಂದು ಮುಂಬೈಯ ಕೋಲಾಡ್‌ನಿಂದ ಗೋವಾದ ವೆರ್ನಾವರೆಗೆ ಹಾಗೂ ಆ 24ರಂದು ವೆರ್ನಾದಿಂದ ಕೋಲಾಡ್ ಕಡೆಗೆ ಕಾರ್ ರೋರೋ ಸೇವೆಗೆ ಚಾಲನೆ ಸಿಗಲಿದೆ. ಸೆಪ್ಟೆಂಬರ್ 11ರವರೆಗೆ ಮುಂದುವರಿಯಲಿದೆ. ಇದಕ್ಕಾಗಿ ಒಟ್ಟು 20 ವಿಶೇಷ ವ್ಯಾಗನ್ ಸಿದ್ಧವಾಗಿದೆ. ಒಂದು ವ್ಯಾಗನ್‌ನಲ್ಲಿ 2ರಂತೆ ಒಟ್ಟು 40 ಕಾರುಗಳನ್ನು ರೈಲಿನಲ್ಲಿ ಸಾಗಿಸಲು ಅವಕಾಶವಿದೆ.
ಪ್ರತಿ ಎರಡು ದಿನಗಳಿಗೊಮ್ಮೆ ಕೋಲಾಡ್ ಮತ್ತು ವೆರ್ನಾದಿಂದ ಸಾಯಂಕಾಲ 5 ಗಂಟೆಗೆ ಈ ವಿಶೇಷ ರೈಲು ಸಂಚರಿಸಲಿದೆ. 14 ತಾಸಿನ ನಂತರ ತಲುಪಬೇಕಾದ ಸ್ಥಳಕ್ಕೆ ತಲುಪಲಿದೆ. ಈ ಸೇವೆ ಬಳಸಲು 4 ಸಾವಿರ ರೂ ಮುಂಗಡ ನೀಡಬೇಕು. ನಂತರ ಒಂದು ಕಾರಿಗೆ 7875 ರೂ ನೀಡಿ, ರೈಲಿನ ಮೇಲೆ ಕಾರು ನಿಲ್ಲಿಸಿ ಊರು ತಲುಪಬಹುದಾಗಿದೆ.
ಇನ್ನೂ ಈ ರೈಲಿನ ಜತೆ 3 ಟೈರ್ ಎಸಿ, ಎಸಿ ಚೇರ್ ಕಾರ್ ಸೇರಿ ಪ್ರಯಾಣಿಕರ ಬೋಗಿಗಳು ಇವೆ. ಒಂದು ಕಾರಿಗೆ ಗರಿಷ್ಠ 3 ಜನರಂತೆ ಹಣ ಪಾವತಿಸಿ ಅದೇ ರೈಲಿನಲ್ಲಿ ಸಂಚರಿಸಬಹುದಾಗಿದೆ.
Discussion about this post