ಮೇಷ ರಾಶಿ: ನಿಮ್ಮ ವಿಶ್ವಾಸ ವೃದ್ಧಿಯಾಗಲಿದೆ. ಪ್ರಗತಿ ಸಾಧ್ಯವಿದೆ. ತಂದೆಯ ಸಲಹೆಪಡೆದು ಕೆಲಸ ಮಾಡಿ. ಕೆಲಸದ ಸ್ಥಳದಲ್ಲಿ ಹಣದ ಪ್ರಯೋಜನ ಸಿಗುತ್ತದೆ. ಧಾರ್ಮಿಕ ಸ್ಥಳ ಭೇಟಿ ಅಥವಾ ಸಂತರಿoದ ಮನಸ್ಸಿನ ಶಾಂತಿ-ಸಾoತ್ವಾನ ಸಿಗುತ್ತದೆ.
ವೃಷಭ ರಾಶಿ: ಹಣ ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರ ಮಾಡಬೇಡಿ. ಒಬ್ಬ ಹತ್ತಿರದ ಸಂಬoಧಿಗೆ ಹೆಚ್ಚು ಗಮನ ನೀಡಬೇಕಾಗಬಹುದು. ಅವರ ಬೆಂಬಲ ಹಾಗೂ ಆರೈಕೆ ಮುಖ್ಯ.
ಮಿಥುನ ರಾಶಿ: ವ್ಯಾಪಾರಿಗಳಿಗೆ ಈ ದಿನ ಹಾನಿ ಸಾಧ್ಯತೆಯಿದೆ. ವ್ಯಾಪಾರ ವೃದ್ಧಿಗೆ ಖರ್ಚು ಮಾಡುವ ಸಮಯ ಬರಬಹುದು. ಬೇರೆಯವರ ಮೇಲೆ ನಿರ್ಧಾರ ಹೇರಲು ಪ್ರಯತ್ನಿಸಿದರೆ ನಿಮ್ಮದೇ ಹಿತಾಸಕ್ತಿಗೆ ಧಕ್ಕೆ ಆಗಲಿದೆ. ಅನುಕೂಲಕರ ಫಲಿತಾಂಶಪಡೆಯಲು ತಾಳ್ಮೆ ಅಗತ್ಯ.
ಕರ್ಕ ರಾಶಿ: ದೈಹಿಕ ಅನಾರೋಗ್ಯದಿಂದ ಚೇತರಿಕೆ ಸಾಧ್ಯ. ನಿಧಾನವಾದ ಪಾವತಿಗಳು ಹಣದ ಪರಿಸ್ಥಿತಿ ಸುಧಾರಣೆಗೆ ಅನುಕೂಲ. ಮನೆಯ ಕೆಲಸದಲ್ಲಿ ಶಿಸ್ತು ಅಗತ್ಯ. ಮಾನಸಿಕ ಒತ್ತಡ ಸಾಮಾನ್ಯ.
ಸಿಂಹ ರಾಶಿ: ಆರ್ಥಿಕ ಅಭಿವೃದ್ದಿ ಲಕ್ಷಣಗಳಿವೆ. ಸಾಲ ನೀಡಿದ ವ್ಯಕ್ತಿಯಿಂದ ಮರು ಪಾವತಿ ಸಾಧ್ಯವಿದೆ. ನಿಮ್ಮ ಪ್ರೀತಿಪಾತ್ರರು ಸಂತೋಷದಿoದಿರುತ್ತಾರೆ.
ಕನ್ಯಾ ರಾಶಿ: ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚನ್ನಾಗಿರಲಿದೆ. ಹಣದ ಪ್ರಾಮುಖ್ಯತೆ ಅರ್ಥವಾಗುತ್ತದೆ. ಈ ದಿನ ಹಣದ ಅಗತ್ಯ ಎದುರಾಗುತ್ತದೆ.
ತುಲಾ ರಾಶಿ: ಆಭರಣಗಳಲ್ಲಿನ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ನೀವು ಹೆಚ್ಚೇನೂ ಮಾಡದೇ ಇತರರ ಗಮನ ಸೆಳೆಯಲು ಇದೊಂದು ಪರಿಪೂರ್ಣ ದಿನ. ನಿಮ್ಮ ಆಂತರಿಕ ಶಕ್ತಿ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ಬೆಂಬಲಿಸುತ್ತದೆ.
ವೃಶ್ಚಿಕ ರಾಶಿ: ಈ ದಿನ ಸುಲಭವಾಗಿ ಬಂಡವಾಳ ಸಿಗುತ್ತದೆ. ಬಾಕಿಯಿರುವ ಸಾಲಗಳ ಸಂಗ್ರಹ ಸಾಧ್ಯ. ಜಂಟಿ ಹಾಗೂ ಪಾಲುದಾರಿಕೆ ಯೋಜನೆಗಳಿಗೆ ಸಹಿ ಹಾಕಬೇಡಿ.
ಧನು ರಾಶಿ: ಸಹೋದರ-ಸಹೋದರಿಯರಿಂದ ಆರ್ಥಿಕ ಲಾಭ ಸಾಧ್ಯ. ಸಹೋದರ-ಸಹೋದರಿಯರ ಸಲಹೆಪಡೆಯಿರಿ. ಕುಟುಂಬ ಸದಸ್ಯರ ಜೊತೆ ವಿಶ್ರಾಂತಿ ಕ್ಷಣ ಕಳೆಯಿರಿ. ಸ್ನೇಹ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುವದರಿಂದ ಎಚ್ಚರವಾಗಿರಿ. ಕೆಲಸದಲ್ಲಿ ಮೆಲುಗೈ ಸಾಧ್ಯ.
ಮಕರ ರಾಶಿ: ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ. ಒತ್ತಡದ ಹೊರತಾಗಿಯೂ ಚೈತನ್ಯದಿಂದ ಇರಿ. ಅನಗತ್ಯ ಹಣ ವೆಚ್ಚ ಮಾಡಿದರೆ ತೊಂದರೆ ಸಾಮಾನ್ಯ.
ಕುಂಭ ರಾಶಿ: ನಿಮ್ಮಲ್ಲಿನ ಕೋಪ ಘರ್ಷಣೆಗೆ ಕಾರಣವಾಗಬಹುದು. ಆರ್ಥಿಕ ಅಭಿವೃದ್ಧಿಗಾಗಿ ಹಣ ಉಳಿಸಿ. ಒಳ್ಳೆಯ ಕಡೆ ಹೂಡಿಕೆ ಮಾಡಿ.
ಮೀನ ರಾಶಿ: ಸ್ವಲ್ಪ ಪ್ರಮಾಣದ ಪ್ರಯತ್ನವೂ ಎಲ್ಲಾ ಸಮಸ್ಯೆ ಪರಿಹರಿಸುತ್ತದೆ. ಅಗತ್ಯ ಕೆಲಸಗಳಿಗೆ ಸಮಯ ನೀಡದೇ ಇದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಅನಗತ್ಯ ಕೆಲಸಗಳನ್ನು ನಿರ್ಲಕ್ಷಿಸಿ. ವೈವಾಹಿಕ ಜೀವನ ಪರಿಸ್ಥಿತಿ ಅಸಾಧಾರಣವಾಗಿರುತ್ತದೆ.
Discussion about this post